ಆ. 13ರಂದು ಹೊಸನಗರದಲ್ಲಿ ಮಾಮ್‌ಕೋಸ್ ಷೇರುದಾರರ ಸಭೆ

Written by Mahesha Hindlemane

Published on:

ಹೊಸನಗರ ; ಆ. 13ರ ಬುಧವಾರ ಮಧ್ಯಾಹ್ನ 3:30ಕ್ಕೆ ಮಾಮ್‌ಕೋಸ್ ಷೇರುದಾರರ ಸಭೆಯನ್ನು ಮಾಮ್‌ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿಯವರ ಅಧ್ಯಕ್ಷತೆಯಲ್ಲಿ ಚೌಡಮ್ಮ ರಸ್ತೆಯ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಮಾಮ್‌ಕೋಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮ್ಯಾಮ್‌ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸಹಕಾರ ಭಾರತಿ ಕರ್ನಾಟಕ ಮಾಮ್‌ಕೋಸ್ ಪೇರುದಾರರು ಬುಧವಾರ ಮಧ್ಯಾಹ್ನ 3:30ಕ್ಕೆ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಈ ಸಭೆಗೆ ಎಲ್ಲ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು ಆಗಮಿಸಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಲಿದ್ದಾರೆ ಎಂದು ಎಲ್ಲ ಮಾಮ್‌ಕೋಸ್‌ನ ಎಲ್ಲ ಷೇರುದಾರರು ಆಗಮಿಸಿ ಈ ಸಭೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ನಿರ್ದೇಶಕ ಧಮೇಂದ್ರ ಹೆಚ್, ಮಾಮ್‌ಕೋಸ್ ಹೊಸನಗರ ಶಾಖೆಯ ವ್ಯವಸ್ಥಾಪಕರು, ಮಾಮ್‌ಕೋಸ್‌ನ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment