ಭದ್ರಾವತಿ ; ಕ್ರಿಕೆಟ್ ಆಟದ ವಿಚಾರದಲ್ಲಿ ನಡೆದಿದ್ದ ಕೊಲೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರಿಗೆ ಹಲ್ಲೆಗೆ ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಅರುಣ್ (22) ಎನ್ನುವ ಯುವಕನನ್ನು ಐದು ಜನರ ಯುವಕರ ತಂಡ ಕೊಲೆ ಮಾಡಿತ್ತು. ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ಅರುಣ್ ಕೊಲೆಯ ಪ್ರಮುಖ ಆರೋಪಿ ಅರುಣ್ ಕುಮಾರ್ ಕಾಲಿಗೆ ಮಂಗಳವಾರ ಗುಂಡೇಟು ಬಿದ್ದಿದೆ. ಬಂಧಿಸಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿ ಅರುಣ್ ಕುಮಾರ್ ಗೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಫೈರ್ ಮಾಡಿದ್ದಾರೆ.
ಆರೋಪಿ ಅರುಣ್ ಕುಮಾರ್ ಮೇಲೆ ಐದು ಪ್ರಕರಣಗಳು ದಾಖಲಾಗಿದೆ.