HOSANAGARA ; ತಾಲೂಕಿನ ಮುಂಬಾರು ಗ್ರಾಮ ಪಂಚಾಯತಿ 18ನೇ ಅಧ್ಯಕ್ಷರಾಗಿ ಎನ್ ಕುಮಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಮುಂಬಾರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು ನಡೆದಿದ್ದು ಎನ್ ಕುಮಾರ್ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಎನ್ ಕುಮಾರ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಹೊಸನಗರ ಪಶು ವೈದ್ಯಾಧಿಕಾರಿ ಡಾ. ನಟರಾಜ್ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸಾವಂತೂರಿನ ಅಶ್ವಿನಿ ಶ್ರೀಕಾಂತ್, ಸದಸ್ಯರಾದ ಮುಂಬಾರಿನ ಅನ್ನಪೂರ್ಣ, ಸುವರ್ಣ, ಬೇಹಳ್ಳಿಯ ಮಾಲತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ_ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕಿ ಮಂಜು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರುಗಳಾದ ಲೋಕನಾಯ್ಕ ಕೆ ಟಿ, ಹುಲಗಾರು ಕೃಷ್ಣಮೂರ್ತಿ, ಸಾಲ್ತೋಡಿ ಶೇಖರಪ್ಪ, ಲೇಖನಮೂರ್ತಿ, ಹೆಚ್ ಪ್ರಶಾಂತ ಕುಮಾರ್, ಬಾಳೆಕೊಪ್ಪ ಗಣೇಶ, ಚುಡಾಮಣಿ ಸಹಕಾರ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ವೀರಭದ್ರಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.