ಬೆಳೆಯುವ ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬೆಳೆಯಲಿ ; ರಂಭಾಪುರಿ ಶ್ರೀಗಳು

Written by malnadtimes.com

Published on:

N.R.PURA | ಭಾರತ ಸ್ವಾತಂತ್ರ್ಯಗೊಂಡು 78 ವರುಷಗಳಾಯಿತು. ಎಲ್ಲ ವರ್ಗದ ಜನತೆಯಲ್ಲಿ ದೇಶಾಭಿಮಾನ ಮತ್ತು ರಾಷ್ಟ್ರ ಶ್ರದ್ಧೆ ಬೆಳೆದುಕೊಂಡು ಬರಬೇಕಾಗಿದೆ. ಬೆಳೆಯುವ ಮಕ್ಕಳಲ್ಲಿ ರಾಷ್ಟ್ರ ಭಕ್ತಿ-ಸಾಮರಸ್ಯ ಮತ್ತು ಸೌಹಾರ್ದತೆಗಳನ್ನು ಬೆಳೆಸುವ ಅಗತ್ಯವಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ | ಸ್ವಾತಂತ್ರ್ಯ ವೀರರು-ಯೋಧರಿಗೆ ನಮನಗಳು : ಸಚಿವ ಮಧು ಬಂಗಾರಪ್ಪ

ಅವರು ಗುರುವಾರ ಶ್ರೀ ರಂಭಾಪುರಿ ಪೀಠದ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಹಾಗೂ ಶ್ರೀ ವೀರಭದ್ರಸ್ವಾಮಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿ, ಬ್ರಿಟಿಷರಿಂದ ಮುಕ್ತಗೊಂಡ ನಂತರ ಭಾರತ ದೇಶ ಸಮಗ್ರವಾಗಿ ಬೆಳೆಯುತ್ತಿದೆ. ಹಲವಾರು ಅಭಿವೃದ್ಧಿ ಕಾರ್ಯಗಳು ಹಾಗೂ ಜನಹಿತಾತ್ಮಕ ಮಹತ್ಕಾರ್ಯಗಳು ನಡೆಯುತ್ತಾ ಬಂದಿವೆ. ಸ್ವಾತಂತ್ರ್ಯ ದೊರಕಿಸಿಕೊಡುವ ಹೋರಾಟದಲ್ಲಿ ಅನೇಕರು ಬಲಿದಾನವಾಗಿ ಹೋದುದನ್ನು ಮರೆಯುವಂತಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ, ಸರ್ದಾರ ವಲ್ಲಭಭಾಯಿ ಪಟೇಲ್, ಸುಭಾಷಚಂದ್ರ ಭೋಸ, ಜವಾಹರಲಾಲ್ ನೆಹರು, ಬಾಲಗಂಗಾಧರ ಟಿಳಕ, ಬಿಪಿನ್ ಚಂದ್ರಪಾಲ್, ಲಾಲಾ ಲಜಪತರಾಯ, ಲಾಲಬಹದ್ದೂರು ಶಾಸ್ತ್ರಿ, ವೀರರಾಣಿ ಕಿತ್ತೂರು ಚನ್ನಮ್ಮ, ಝಾಂಸಿ ಲಕ್ಷ್ಮಿಬಾಯಿ, ಕೆಳದಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮೈಲಾರ ಮಹದೇವ ಇನ್ನೂ ಮೊದಲಾದ ಗಣ್ಯರ ತ್ಯಾಗ ಹೋರಾಟದ ಪ್ರತಿಫಲವಾಗಿ ನಮ್ಮೆಲ್ಲರಿಗೂ ಸ್ವಾತಂತ್ರ್ಯ ಪ್ರಾಪ್ತವಾಗಿದೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರಿಯಾಗಿ ಬಾಳುವುದಲ್ಲ. ದೇಶಕ್ಕಾಗಿ ನಾಡು ನುಡಿಗಾಗಿ ನಮ್ಮನ್ನು ನಾವು ಅರ್ಪಿಸಿಕೊಂಡು ಕಾರ್ಯ ಕೈಗೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜಾತ್ಯಾತೀತವಗಿ ಪಕ್ಷಾತೀತವಾಗಿ ನಮ್ಮ ರಾಜಕೀಯ ಧುರೀಣರು ಶ್ರಮಿಸಿ ಸದೃಢ ಸಶಕ್ತ ದೇಶವನ್ನು ಕಟ್ಟುವ ಸಂಕಲ್ಪ ಅವರದಾಗಲಿ. ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಸ್ವಾಭಿಮಾನ, ಸಹೋದರತೆ, ಕಾರ್ಯಶೀಲತೆ, ಗುರು ಹಿರಿಯರಲ್ಲಿ ಸದ್ಭಾವನೆ ಬೆಳೆಸುವ ಮಹತ್ಕಾರ್ಯ ಕೈಗೊಳ್ಳುವುದರ ಕಡೆಗೆ ಎಲ್ಲರ ಗಮನ ಆಸಕ್ತಿ ಇರಬೇಕೆಂದರು.

ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು ಹಾಗೂ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯರು ಉಪಸ್ಥಿತರಿದ್ದರು.

MGNREGA ಪಶು ಶೆಡ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಮಾನದಂಡಗಳೇನು ಇಲ್ಲಿದೆ ಮಾಹಿತಿ

ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಅಳವಂಡಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮಹಾದೇವಿ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್ಚಂದ್ರ ಮತ್ತು ಮಹೇಶಾಚಾರಿ ಹಾಗೂ ಸಹಶಿಕ್ಷಕರು, ಅಭಿಮಾನಿಗಳು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಸ್ವಾತಂತ್ರ್ಯೋತ್ಸವ ನಿಮಿತ್ಯ ಶ್ರೀ ರಂಭಾಪುರಿ ಜಗದ್ಗುರುಗಳು ಚಾಕೊಲೇಟ್ ಮತ್ತು ಸಿಹಿ ವಿತರಿಸಿ ಶುಭ ಹಾರೈಸಿದರು. ದೈಹಿಕ ಶಿಕ್ಷಕ ನಿಜಗುಣಿ ಕಟ್ಟೇಗೌಡರು ಕಾರ್ಯಕ್ರಮ ನಿರೂಪಿಸಿದರು.

Leave a Comment