ಹೊಸನಗರ : ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ನವಮಿ ಸೇರ್ಪಡೆ

Written by Mahesh Hindlemane

Updated on:

ಹೊಸನಗರ : ಪಟ್ಟಣದ ಮಾರಿಗುಡ್ಡ ನಿವಾಸಿ  ಹಾಗೂ ಪುರ ಪಂಚಾಯತ್ ನಲ್ಲಿ 35 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದ ದಿ. ನಾಗರಾಜ ಶೆಟ್ಟಿ ಮತ್ತು ವನಮಾಲ ಅವರ ಮೊಮ್ಮಗಳು, ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ 7 ವರ್ಷಗಳ ಶಿಕ್ಷಕಿಯಾಗಿ  ಸೇವೆ ಸಲ್ಲಿಸಿದ ವಿಜಯ ಗಣೇಶ್ ಇವರ ಮಗಳು 2 ವರ್ಷ 2 ತಿಂಗಳ ಪುಟಾಣಿ ನವಮಿ ಎಸ್.ಆರ್. 14 ವಿವಿಧ ವಿಷಯಗಳನ್ನು ಸರಾಗವಾಗಿ ಹೇಳುವುದರ ಮೂಲಕ 2025ರ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗುವುದರ ಮೂಲಕ ಸಾಧನೆ ಮಾಡಿದ್ದಾಳೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆಯ 9 ಆಕಾರಗಳು, 7 ಉಪ ಜಿಲ್ಲೆ (ತಾಲೂಕು)ಗಳು, 12 ರಾಶಿಚಕ್ರ ಚಿಹ್ನೆಗಳು, 9 ರಾಶಿಚಕ್ರ ಕಲ್ಲುಗಳು, 20 ವೃತ್ತಿಗಳು, ಕನ್ನಡ ವರ್ಣಮಾಲೆಯ 48 ಅಕ್ಷರಗಳು, 16 ಹಣ್ಣುಗಳು, 26 ದೇಹದ ಭಾಗಗಳು, 15 ವಾಹನಗಳು, 8 ಬಣ್ಣಗಳು, 14 ದೇಶೀಯ ಮತ್ತು 16 ಕಾಡು ಪ್ರಾಣಿಗಳನ್ನು ಗುರುತಿಸಿ, ಹೇಳುವ ಮೂಲಕ ಐಬಿಆರ್ ಸಾಧಕಿ ಬಿರುದು ಪಡೆದಿದ್ದಾಳೆ.

Navami S. R. (born on February 14, 2023) of Shivamogga, Karnataka, is titled as ‘IBR Achiever’ for identifying and recalling 9 shapes, 7 subdistricts (Taluks) of Shivamogga district, 12 zodiac signs, 9 zodiac stones, 20 professions, 48 letters of Kannada alphabet words, 16 fruits, 26 parts of the body, 15 vehicles, 8 colours, 14 domestic and 16 wild animals; naming months in a year and days of the week, at the age of 2 years and 2 months, as confirmed on April 22, 2025.

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment