ಹೊಸನಗರ

ವೃದ್ಧಾಪ್ಯ, ವಿಧವಾ ವೇತನ ಕಟ್, ಜನ ಕಂಗಾಲು ; ಸರ್ಕಾರ ಕಣ್ಣು ತೆರೆಯುವುದು ಯಾವಾಗ ?

ಹೊಸನಗರ : ತಾಲ್ಲೂಕಿನಲ್ಲಿ ಸುಮಾರು 3500 ಕ್ಕಿಂತಲ್ಲೂ ಹೆಚ್ಚು ವಿಧವ ವೇತನ, ವೃದ್ಧಾಪ್ಯ ವೇತನ ಅಂಗವಿಕಲ ವೇತನವನ್ನು ಪಡೆಯುತ್ತಿರುವ ಫಲಾನುಭವಿಗಳ ವೇತನ ಸರ್ಕಾರ ತಡೆ ಹಿಡಿದಿದೆ. ಬಡವರ ಬಾಳು ಕೇಳ ತೀರದಾಗಿದೆ. ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸರ್ಕಾರಿ ಸೌಲಭ್ಯಕ್ಕಾಗಿ ವಿಧವೆಯರು, ವೃದ್ದರು ಕಂದಾಯ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ. ಸರ್ಕಾರ ಕಣ್ಣು ತೆರೆಯುವುದು ಯಾವಾಗ? ನಮಗೆ ನ್ಯಾಯ ನೀಡುವುದು ಯಾವಾಗ? ಎಂಬ ಪ್ರಶ್ನೆ ಫಲಾನುಭವಿಗಳಲ್ಲಿ ಮನೆ ಮಾಡಿದೆ.

WhatsApp Group Join Now
Telegram Group Join Now
Instagram Group Join Now

ಬಿಪಿಎಲ್ ಕಾರ್ಡ್‌ಗೆ ₹ 1.20 ಲಕ್ಷ ಆದಾಯ ಮಿತಿ, ವೃದ್ಧಾಪ್ಯಕ್ಕೆ 32 ಸಾವಿರ !

ಬಿಪಿಎಲ್ ಪಡಿತರ ಚೀಟಿ ಹೊಂದಲು ಕುಟುಂಬಕ್ಕೆ ₹ 1.20 ಲಕ್ಷ ಆದಾಯ ಒಳಗೆ ಇರುಬೇಕು ಎಂದು ಸರ್ಕಾರ ನಮೂದಿಸಿದೆ ಆದರೆ ವೃದ್ಧರಿಗೆ, ವಿಧವೆಯರಿಗೆ ಇತರೆ ಸೌಲಭ್ಯ ಪಡೆಯುವವರಿಗೆ ₹ 32 ಸಾವಿರ ಆದಾಯ ಮಿತಿ ನಿಗದಿ ಮಾಡಿರುವುದು ಸರಿಯೇ? ಎಂಬ ಪ್ರಶ್ನೆ ಕಾಡುತ್ತಿದ್ದು ಗ್ರಾಮ ಆಡಳಿತಾಧಿಕಾರಿ ಅಂದಾಜು ₹ 40 ಸಾವಿರದಿಂದ ₹ 1 ಲಕ್ಷದವರೆಗೆ ಪ್ರತಿ ಕುಟುಂಬಕ್ಕೆ ಆದಾಯ ಪ್ರಮಾಣ ಪತ್ರ ನೀಡುವುದು ವಾಡಿಕೆಯಾಗಿದೆ. ಅವರವರ ಆದಾಯ ಮಿತಿಗೆ ಸರಿ ಸಮನವಾಗಿ ಆದಾಯ ಪ್ರಮಾಣಪತ್ರ ನೀಡುತ್ತಾರೆ‌. ಈ ಆದಾಯ ಪ್ರಮಾಣಪತ್ರವನ್ನು ಕುಟುಂಬದ ಮಕ್ಕಳು, ಮೊಮ್ಮಕ್ಕಳು ಶಾಲೆ, ಕಾಲೇಜ್‌ಗಳಿಗೆ ನೀಡುವುದು ಪ್ರತಿ ಕುಟುಂಬದ ವಾಡಿಕೆಯಾಗಿದೆ. ಇದನ್ನೇ ಮಾನದಂಡ ಮಾಡಿಕೊಂಡಿರುವ ಸರ್ಕಾರ ಸೌಲಭ್ಯ ಪಡೆಯಲು ₹ 32 ಸಾವಿರ ನಿಗದಿಪಡಿಸಿ ಅಂಗವಿಕಲ, ವೃದ್ಧಾಪ್ಯ ವೇತನ, ವಿಧವಾ ವೇತನ ಪಡೆಯಲು ಸರ್ಕಾರದ ಸುತ್ತೋಲೆಯ ಪ್ರಕಾರ ₹ 32 ಸಾವಿರ ಮೀರಿರಬಾರದು ಎಂದು ಆದೇಶಿಸುವುದು ಯಾವ ನ್ಯಾಯ?.

ವಿಧವಾ, ವೃದ್ಧಾಪ್ಯ ವೇತನ ಕಟ್ !

ಕರ್ನಾಟಕ ರಾಜ್ಯ ಸರ್ಕಾರ ಐದು ಉಚಿತ ಗ್ಯಾರಂಟಿ ನೀಡಿರುವುದು ಸರಿಯಷ್ಟೆ? ಆದರೆ ಯಾರಿಗೂ ಸರಿಯಾಗಿ ಜಾರಿಯಾಗಿಲ್ಲ ಇವರ ಐದು ಗ್ಯಾರಂಟಿ ಉಳಿಸಿಕೊಳ್ಳುವ ಸಲುವಾಗಿ ಬಡವರ ಬಿಪಿಎಲ್ ಕಾರ್ಡ್ ರದ್ದುಪಡಿಸುವುದು. ಜೊತೆಗೆ ಅಂಗವಿಕಲರು ವಿಧವೆಯರು, ವೃದ್ದರಿಗೆ ಸರ್ಕಾರದಿಂದ ಬರುವ 600 ರೂ., 800ರೂ. 1000 ರೂ.ಗೆ ಸುಮಾರು ಐದು ತಿಂಗಳಿಂದ ಹಣ ನೀಡದೇ ಗೋಳಾಡಿಸುತ್ತಿರುವುದು ಸರಿಯಲ್ಲ. ಕೆಲವರು ಮಾತ್ರೆಗಳಿಗಾಗಿ, ಕೆಲವರು ಊಟ ಮಾಡುವ ಸಲುವಾಗಿ ಒಟ್ಟಾರೆ ಈ ಸರ್ಕಾರಿ ಸೌಲಭ್ಯ ಬರುತ್ತಿರುವುದರಿಂದಲ್ಲೂ ಜೀವನ ಸಾಗಿಸುವವರು ತುಂಬಾ ಜನ ಬಡವರಿದ್ದಾರೆ. ಎಲ್ಲರ ಮನೆಯಲ್ಲಿಯೂ ವೃದ್ಧರನ್ನು ಸರಿಯಾಗಿ ನೋಡಿಕೊಳ್ಳದ ಕುಟುಂಬಗಳು ಸಾಕಷ್ಟಿದೆ. ಇವರಿಗೆ ನೆರವಿಗಾಗಿ ಹಿಂದಿನ ಸರ್ಕಾರಗಳು ಸಾಕಷ್ಟು ಸರ್ಕಾರಿ ಸೌಲಭ್ಯ ನೀಡುತ್ತಾ ಬಂದಿದ್ದು ಅದನ್ನು ಐದು ತಿಂಗಳಿಂದ ನಿಲ್ಲಿಸಿದರೆ ಆ ಬಡ ರೋಗಿಗಳ ಬಡ ಕುಟುಂಬದ ಗತೀಯೇನು?

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅಧಿಕಾರಿಗಳ ಗಮನಕ್ಕೆ:

ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ಸರ್ಕಾರ ಸರ್ಕಾರಿ ಸೌಲಭ್ಯಗಳ ಮಿತಿ ₹ 32 ಸಾವಿರ ನಿಗದಿಪಡಿಸಿದ್ದಾರೆ. ನಮ್ಮ ಗ್ರಾಮ ಆಡಳಿತಾಧಿಕಾರಿಗಳು 40 ಸಾವಿರ ಒಳಗೆ ಆದಾಯ ಮಿತಿ ಹಾಕುವುದಿಲ್ಲ. ಅದು ಅಲ್ಲದೇ ಮಕ್ಕಳಿಗೆ ಮೊಮ್ಮಕ್ಕಳಿಗೆ ಶಾಲೆಗೆ ಆದಾಯ ಪ್ರಮಾಣ ಪತ್ರ ನೀಡಲು 40ಕ್ಕಿಂತಲ್ಲೂ ಹೆಚ್ಚು ಆದಾಯ ಮಿತಿ ಹಾಕಿರುವಾಗ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಪಿಂಚಣಿ ರದ್ದಾಗುತ್ತಿದೆ. ಇದು ಸರ್ಕಾರದ ವತಿಯಿಂದ ಆದಾಯ ಮಿತಿ ಹೆಚ್ಚಿಸಿದರೆ ಮಾತ್ರ ಫಲಾನುಭವಿಗಳಿಗೆ ಪಿಂಚಣಿ ಸಿಗಲು ಸಾಧ್ಯ. ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ.

ಶಾಸಕರೇ ಇತ್ತ ಗಮನ ಹರಿಸಿ ಬಡ ರೋಗಿಗಳನ್ನು ಕಾಪಾಡಿ :

ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರವರಿಗೆ ಬಡವರ ಕಣ್ಣೀರು ಏನೂ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಇವರು ತಕ್ಷಣ ಸರ್ಕಾರದ ಗಮನಕ್ಕೆ ತಂದು ಸರ್ಕಾರ ಸೌಲಭ್ಯದಲ್ಲಿ ಬಿಪಿಎಲ್ ಕಾರ್ಡ್ ಪಡಿತರ ಚೀಟಿದಾರರಿಗೆ ₹ 1.20 ಲಕ್ಷ ಆದಾಯ ಮಿತಿ ಇರುವಂತೆ ಪಿಂಚಣಿ ಪಡೆಯುವ ಕುಟುಂಬಕ್ಕೆ ಕನಿಷ್ಟ ₹ 60 ಸಾವಿರ ಆದಾಯ ಮಿತಿ ಅಳವಡಿಸಿದರ ಸಾಕಷ್ಟು ಕುಟುಂಬಗಳು ಸಾಕಷ್ಟು ವೃದ್ಧರು ಸಾಕಷ್ಟು ವೃದ್ಧಾಪ್ಯ ವೇತನ ಪಡೆಯುತ್ತಿರುವ ಕುಟುಂಬಗಳಿಗೆ ಔಷಧಿ ಮಾತ್ರೆಗಾದರೂ ದಾರಿ ಮಾಡಿಕೊಟ್ಟಂತೆ ಆಗಲಿದೆ. ಇನ್ನಾದರೂ ಶಾಸಕರು ಸರ್ಕಾರದ ಗಮನಕ್ಕೆ ತರುವವರೆ ಎಂದು ಕಾದು ನೋಡಬೇಕಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]