ಹೊಸನಗರ ; ಶರಾವತಿ ಸಂತ್ರಸ್ತರ ಆರು ದಶಕಗಳ ಶಾಪ ವಿಮೋಚನೆಯ ಈ ಮಂಗಳ ಕಾರ್ಯಕ್ರಮದಲ್ಲಿ ರಾಜ್ಯದ ಜನತೆ ಸಾಕ್ಷರಾಗುವಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಕರೆ ನೀಡಿದರು.
ಇಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೇತುವೆ ಲೋಕಾರ್ಪಣೆ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಸಾಗರದ ನೆಹರು ಮೈದಾನದಲ್ಲಿ ಜುಲೈ 14ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

423.15 ಕೋಟಿ ರೂ. ವೆಚ್ಚದ 2125 ಮೀಟರ್ ಉದ್ದದ ಕನಸಿನಲ್ಲಿ ಕಂಡರಿಯದ ಐತಿಹಾಸಿಕ ಅಂಬರಗೋಡ್ಲು – ಕಳಸವಳ್ಳಿ – ಸಿಗಂದೂರು ಸಂಪರ್ಕ ಸೇತುವೆ ಸೋಮವಾರ ಬೆಳಗ್ಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಶಾಸಕರುಗಳು ವಿಧಾನ ಪರಿಷತ್ ಸದಸ್ಯರು, ರಾಜ್ಯದ ಹಿರಿಯ ಮುತ್ಸದ್ದಿ ನಾಯಕರಗಳ ಸಮ್ಮುಖದಲ್ಲಿ ಐತಿಹಾಸಿಕ ಸೇತುವೆ ಉದ್ಘಾಟನೆಗೊಳ್ಳಲಿದ್ದು ಜಿಲ್ಲೆಯ ಜನರು, ತಾಯಿ ಚೌಡೇಶ್ವರಿ ದೇವಿಯ ಭಕ್ತ ವೃಂದದವರು ಅತಿಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗಳಿಸಿಕೊಡಬೇಕೆಂದು ಹರತಾಳು ಹಾಲಪ್ಪ ಕರೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಮೇಘರಾಜ್, ತಾಲೂಕು ಅಧ್ಯಕ್ಷ ಕೆ.ವಿ ಸುಬ್ರಮಣ್ಯ, ಉಮೇಶ್ ಕಂಚುಗಾರ್, ಎನ್.ಆರ್ ದೇವಾನಂದ್, ಹಾಲಗದ್ದೆ ಉಮೇಶ್, ಎ.ವಿ ಮಲ್ಲಿಕಾರ್ಜುನ್, ಹೆಚ್.ಎನ್ ಶ್ರೀಪತಿ ರಾವ್, ಸತೀಶ್, ಆರ್.ಟಿ ಗೋಪಾಲ್, ಮನೋದರ, ಎಸ್.ಎಚ್ ಲಿಂಗಮೂರ್ತಿ, ವಿಶ್ವನಾಥ್, ಸುಮ ಸುರೇಶ್, ಕೃಷ್ಣವೇಣಿ, ಗಾಯತ್ರಿ ನಾಗರಾಜ್, ಶಶಿಕಲಾ ಅನಂತ್ ಮೊದಲಾದವರು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.