ವಿದ್ಯುತ್ ವ್ಯತ್ಯಯ : ಫೆ.11 ಮತ್ತು 12ರಂದು ಮಂಡ್ಲಿ ಸುತ್ತಮುತ್ತಲ ವಿದ್ಯುತ್ ಪೂರೈಕೆ ಸ್ಥಗಿತ

Written by Koushik G K

Published on:

ಶಿವಮೊಗ್ಗ ಶಿವಮೊಗ್ಗ ತಾಲ್ಲೂಕಿನ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್–1 (ಕಲ್ಲೂರು–ಮಂಡ್ಲಿ) ಮಾರ್ಗದ ವ್ಯಾಪ್ತಿಯಲ್ಲಿ 11 ಕೆವಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ 11 ಮತ್ತು 12ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಅವಧಿಯಲ್ಲಿ ಅನುಪಿನಕಟ್ಟೆ, ಪುರದಾಳು, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಹನುಮಂತಾಪುರ, ಬೆಳ್ಳೂರು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಇರದು.

ವಿದ್ಯುತ್ ಗ್ರಾಹಕರು ಈ ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

Leave a Comment