ಹೊಸನಗರ

ರೈಲ್ವೆ ಸಂಪರ್ಕಕ್ಕೆ ಹೊಸನಗರವನ್ನು ಸೇರಿಸಿಕೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿ ; ಪೂರ್ಣೇಶ್ ಮಲೆಬೈಲು

ಹೊಸನಗರ : ರೈಲ್ವೆ ಸಂಪರ್ಕಕ್ಕೆ ಹೊಸನಗರವನ್ನು ಸೇರಿಸಿಕೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿ ಎಂದು ಹೊಸನಗರ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು ಮನವಿ ಮೂಲಕ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಲೆನಾಡು ಕರಾವಳಿ ರೈಲು ಸಂಪರ್ಕಕ್ಕೆ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಸಂಪರ್ಕಕ್ಕೆ ರೈಲುಮಾರ್ಗ ನಿರ್ಮಾಣಕ್ಕೆ DPR (ವಿಸ್ತ್ಕೃತ ಯೋಜನಾ ವರದಿ) ತಯಾರಿಗೆ ಟೆಂಡರ್ ಕರೆಯಾಗಿದ್ದು, ಮಾರ್ಗವು ಸುಮಾರು 332 ಕಿ.ಮೀ ಉದ್ದ ಹೊಂದಿದ್ದು, ಸುಮಾರು 3300 ಕೋಟಿಯ ಅಂದಾಜು ವೆಚ್ಚದ ಯೋಜನೆಯಾಗಿದೆ.

2018 ರಲ್ಲಿ ಸದಾನಂದಗೌಡರು ರೈಲ್ವೆ ಮಂತ್ರಿಯಾಗಿದ್ದಾಗ ಹೊಸನಗರವನ್ನು ಕೂಡ ಈ ಯೋಜನೆಯಲ್ಲಿ ಸಂಪರ್ಕಕ್ಕೆ ಸೇರಿಸುವಂತೆ ಹೊಸನಗರ ಜನತೆ ಮನವಿ ಮಾಡಿದ್ದರು, ಅದಕ್ಕೆ ಪರಿಶೀಲಿಸುತ್ತೇವೆ ಎನ್ನುವ ಪ್ರತ್ಯುತ್ತರ ಕೂಡ ಬಂದಿದೆ. ಈಗ ಅರಸಾಳು-ರಿಪ್ಪನ್‌ಪೇಟೆ, ತೀರ್ಥಹಳ್ಳಿ, ಶೃಂಗೇರಿ ಮೂಲಕ ಸಂಪರ್ಕ ರಸ್ತೆ ಹಾದು ಹೋಗುವ ಮಾತು ನಡೆಯುತ್ತಿದೆ. ಹೊಸನಗರ ತಾಲ್ಲೂಕು ಕೇಂದ್ರವಾಗಿದ್ದು ನಾಡಿನ ಜನತೆಗೆ ಬೆಳಕು ನೀಡಲು ಸರ್ವಸ್ವ ಕಳೆದುಕೊಂಡ ತಾಲ್ಲೂಕಾಗಿದ್ದು, ಹೊಸನಗರದ ತ್ಯಾಗವನ್ನು ಮರೆಯದೇ ಈ ರೈಲ್ವೆ ಸಂಪರ್ಕದಲ್ಲಿ ತಾಲ್ಲೂಕು ಕೇಂದ್ರವಾದ ಹೊಸನಗರವನ್ನು ಸೇರಿಸಿಕೊಂಡು DPR ತಯಾರಿಸಬೇಕು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಹೊಸನಗರವನ್ನು ಈ ಯೋಜನೆಯಿಂದ ಹೊರಗಿಡುವ ಯಾವ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ರೈಲ್ವೆ ಮಾರ್ಗ ಅರಸಾಳು, ರಿಪ್ಪನ್‌ಪೇಟೆ, ಹೊಸನಗರ ತೀರ್ಥಹಳ್ಳಿ ಮೂಲಕ ಹಾದು ಹೋಗಬೇಕು ದಶಕಗಳಿಂದ ಆದ ಅನ್ಯಾಯವನ್ನು ರೈಲ್ವೆ ಸಂಪರ್ಕಕ್ಕೆ ನಮ್ಮನ್ನು ಸೇರಿಸಿಕೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಹೊಸನಗರ ತಾಲೂಕು ವರ್ತಕರ ಸಂಘ ಆಗ್ರಹಿಸಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]