HOSANAGARA | ಮಲೆನಾಡಿನಾದ್ಯಂತ ಪುನರ್ವಸು ಮಳೆ ಅಬ್ಬರದಿಂದಲೇ ಆರಂಭಗೊಂಡಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಮಳೆ ಬಿರುಸಿನಿಂದ ಬರುತ್ತಿದ್ದು ಶರಾವತಿ ಜಲಾನಯನ ಪ್ರದೇಶದ ಇಕ್ಕೆಲಗಳ ಹಳ್ಳ, ಕೊಳ್ಳ, ಉಪನದಿಗಳು ತುಂಬಿ ಹರಿಯುತ್ತಿದೆ.
ಹೊಸನಗರದಲ್ಲಿ ಕೆಡಿಪಿ ಸಭೆ | ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಆರೋಗ್ಯ ಇಲಾಖೆಯವರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ; ಶಾಸಕ ಬೇಳೂರು
ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.
ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ?
- ಸಾವೇಹಕ್ಲು : 138 ಮಿ.ಮೀ.
- ಚಕ್ರಾನಗರ : 125 ಮಿ.ಮೀ.
- ಮಾಸ್ತಿಕಟ್ಟೆ : 116 ಮಿ.ಮೀ.
- ಹುಲಿಕಲ್ : 115 ಮಿ.ಮೀ.
- ಬಿದನೂರುನಗರ : 104 ಮಿ.ಮೀ.
- ಹುಂಚ : 93.4 ಮಿ.ಮೀ.
- ಮಾಣಿ : 82 ಮಿ.ಮೀ.
- ಹೊಸನಗರ : 70 ಮಿ.ಮೀ,
- ಕಾರ್ಗಲ್ : 69.6 ಮಿ.ಮೀ.
- ರಿಪ್ಪನ್‌ಪೇಟೆ : 28.2 ಮಿ.ಮೀ.
- ಅರಸಾಳು 21.6 ಮಿ.ಮೀ.
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ಜಲಾಶಯ ನೀರಿನ ಮಟ್ಟ ಶನಿವಾರ ಬೆಳಗ್ಗೆ 8 ಗಂಟೆಗೆ 1764.80 ಅಡಿ ತಲುಪಿದ್ದು ಜಲಾಶಯಕ್ಕೆ 20420 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ಬಾರಿ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1744.40 ಅಡಿ ದಾಖಲಾಗಿದ್ದು ಕಳೆದ ವರ್ಷಕ್ಕಿಂತ 20 ಅಡಿಗಳಷ್ಟು ಹೆಚ್ಚಿನ ನೀರು ಸಂಗ್ರಹವಾಗಿದೆ.