HOSANAGARA | ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಕ್ಷೀಣಿಸಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಕ್ರಾನಗರದಲ್ಲಿ 20 ಸೆಂ.ಮೀ. ಮಳೆ ದಾಖಲಾಗಿದೆ.
ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಇಲ್ಲಿ ಕೊಡಲಾಗಿದೆ.
Karnataka Rain : ಇಂದು ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ, ಇನ್ನೆಷ್ಟು ದಿನ ಮಳೆಯಾಗಲಿದೆ ?
ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?
- ಚಕ್ರಾನಗರ : 201 mm
- ಹುಲಿಕಲ್ : 189 mm
- ಯಡೂರು : 188 mm
- ಮಾಸ್ತಿಕಟ್ಟೆ : 186 mm
- ಮಾಣಿ : 185 mm
- ಸಾವೇಹಕ್ಲು : 155 mm
- ಕಾರ್ಗಲ್ (ಸಾಗರ) : 110 mm
- ಹೊಸನಗರ : 82 mm
- ಹುಂಚ : 75 mm
- ರಿಪ್ಪನ್‌ಪೇಟೆ : 42 mm
- ಅರಸಾಳು : 24 mm
ಲಿಂಗನಮಕ್ಕಿ ಜಲಾಶಯ :
1819 ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ 2.15 ಅಡಿ ನೀರು ಬಂದಿದ್ದು, ಜಲಾಶಯದ ನೀರಿನ ಮಟ್ಟ 1812.65 ಅಡಿ ತಲುಪಿದೆ. ಜಲಾಶಯಕ್ಕೆ 82587 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಗುರುವಾರ ಬೆಳಗ್ಗೆ ಜಲಾಶಯದಿಂದ ಹೆಚ್ಚಿನ ನೀರು ಬಿಡುವ ಸಂಭವವಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1787.45 ಅಡಿ ದಾಖಲಾಗಿತ್ತು.
RIPPONPETE ಮಳೆಯ ನಡುವೆಯೂ ವೈಭವದೊಂದಿಗೆ ಜರುಗಿದ ಕೆಂಚನಾಲ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ