Ration card:ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಯಾರ್ಯಾರು ಹೊಸ ರೇಷನ್ ಕಾರ್ಡ್‌ಗೆ ಮತ್ತು ತಮ್ಮಲ್ಲಿರುವಂತಹ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ತಿದ್ದುಪಡಿ ಮಾಡಿಕೊಳ್ಳಲು ಇಲಾಖೆಗೆ ಅರ್ಜಿ ಸಲ್ಲಿಸಬೇಕೆ ? ಇವತ್ತು ಅಂದ್ರೆ 28-6-2024 ರಂದು ಮತ್ತೊಮ್ಮೆ ಅವಕಾಶ ಮಾಡಿಕೊಡ್ತಿದ್ದಾರೆ ಅಂದ್ರೆ ಮೆಡಿಕಲ್ ಎಮರ್ಜೆನ್ಸಿಗೋಸ್ಕರ ಯಾರು ಹೊಸ ರೇಷನ್ ಕಾರ್ಡ್ ಮತ್ತು ತಮ್ಮ ಹಳೆಯ ರೇಶನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕುವವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದಾರೆ.
Read More:ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ರಿಜಿಸ್ಟರ್ ಆಗಿದೆ? ಈ ರೀತಿ ಚೆಕ್ ಮಾಡಿ, ಅಪಾಯದಿಂದ ಪಾರಾಗಿ!
ಮೊದಲನೆಯದಾಗಿ ಮೆಡಿಕಲ್ ಎಮರ್ಜೆನ್ಸಿಗೋಸ್ಕರ ಯಾರು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು ಅಂತಿರುವವರಿಗೆ ತಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಮತ್ತು ಕುಟುಂಬ ಸದಸ್ಯರೊಬ್ಬರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಇರುವ ಮೊಬೈಲ್ ನಂಬರನ್ನೂ ತಗೊಂಡು ನೀವು ಬೆಳಿಗ್ಗೆ ಹತ್ತರಿಂದ ಮಧ್ಯಾಹ್ನ 12:00 ಒಳಗೆ ಹೋಗಿ ನೀವು ಅಲ್ಲಿಂದ ಸಲ್ಲಿಸಬಹುದಾಗಿರುತ್ತದೆ.
ಹಾಗೇ ತಮ್ಮಲ್ಲಿರುವಂತಹ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ತಿದ್ದುಪಡಿ ಮಾಡಿಕೊಳ್ಳಲು ಬಯಸಿರುವವರು ಮೊದಲನೆಯದಾಗಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳದಿಂದ ಸಾರ್ವಜನಿಕರಿಗೆ ಮಧ್ಯಾಹ್ನ 12:00 ರಿಂದ ಎರಡು ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ಮಾಡಿಕೊಡ್ತಿದೆ. ಫ್ರೆಂಡ್ ಹಾಗೇನೇ ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು , ಮಂಡ್ಯ, ಮೈಸೂರು ಹಾಗೂ ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಿಂದ ಸಾರ್ವಜನಿಕರಿಗೆ ಮಧ್ಯಾಹ್ನ 2:00 ರಿಂದ ನಾಲ್ಕು ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಹಾಗೆ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ ಹಾಗೂ ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಸಂಜೆ 4:00 ರಿಂದ ಆರು ಗಂಟೆಯವರೆಗೆ ತಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡ್ತಿದೆ. ಯಾರು ಹೊಸ ರೇಷನ್ ಕಾರ್ಡ್‌ಗೆ ಮತ್ತು ತಮ್ಮ ಹಳೆಯ ರೇಷನ್ ಕಾರ್ಡ್ ಮಾಹಿತಿ ತಿದ್ದುಪಡಿ ಮಾಡಿಕೊಳ್ಳಿಕ್ಕೆ ಅರ್ಜಿ ಹಾಕಬೇಕು ಅಂತ ಇದ್ದೀವಿ ಅಂತವರು ತಮ್ಮ ಡಾಕ್ಯುಮೆಂಟ್‌ಗಳನ್ನು ತಗೊಂಡು ನೀವು ನಿಮ್ಮ ಹತ್ತಿರದ ಗ್ರಾಮ ಓನ್ ಹಾಗು ಕರ್ನಾಟಕ ಓನ್ ನಲ್ಲಿ ಮಾತ್ರ ಮಾಡಿಸಬಹುದಾಗಿದೆ.
Read More:Ganga kalyana ರೈತರಿಗೆ ಶುಭ ಸುದ್ದಿ ,ಗಂಗಾ ಕಲ್ಯಾಣ ಯೋಜನೆ 2024 ಅರ್ಜಿ ಅಹ್ವಾನ!