ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿ ; ಗುರುದೇವ ಭಂಡಾರ್ಕರ್

Written by Mahesha Hindlemane

Published on:

ಹೊಸನಗರ ; ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಹಿರಿಯ ಬರಹಗಾರರು ಹಾಗೂ ಓದುಗರ ಗುರುದೇವ ಭಂಡಾರ್ಕರ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಬಸ್ ನಿಲ್ದಾಣದ ಸಮೀಪವಿರುವ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ ಪುಸ್ತಕಗಳನ್ನು ಓದಬೇಕು ಹಾಗೂ ಪುಸ್ತಕದಲ್ಲಿರುವ ತಮಗೆ ಯೋಗ್ಯವಾದ ಬರಹಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು. ಇದರಿಂದ ಉತ್ತಮ ಬರಹಗಾರರಿಗೆ ಇನ್ನೂ ಉತ್ತಮ ಗ್ರಂಥಗಳನ್ನು ಬರೆಯಲು ಹುಮ್ಮಸ್ಸು ಬರುತ್ತದೆ. ಓದುವವರು ಹೆಚ್ಚದಂತೆ ಉತ್ತಮ ಬರಹಗಾರರು ಹುಟ್ಟಿಕೊಳ್ಳುತ್ತಾರೆ ಮತ್ತು ಸಮಾಜಕ್ಕೆ ಬರಹಗಾರರಿಂದ ಉತ್ತಮ ಕೊಡುಗೆಯು ಲಭಿಸುತ್ತದೆ ಎಂದರು.

ಓದುಗಾರರಾದ ಎನ್.ಎಸ್ ಉಡುಪ ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮಕ್ಕೊಂದು ಗ್ರಂಥಾಲಯವಿದ್ದರೆ ಓದುಗಾರರ ಸಂಖ್ಯೆಯು ಹೆಚ್ಚುತ್ತದೆ. ಸಮಾಜದಲ್ಲಿ ಓದುಗರರು ಹೆಚ್ಚಾಗುವುದರಿಂದ ಸಮಾಜದಲ್ಲಿ ಶಾಂತಿ ಸಹಬಾಳ್ವೆಯು ನೆಲೆಸಿರುತ್ತದೆ. ಪ್ರತಿಯೊಬ್ಬರು ಗ್ರಂಥಾಲಯಗಳಿಗೆ ಹೋಗಿ ತಮಗೆ ತಿಳುವಳಿಕೆಗಾಗಿ ಬೇಕಾಗುವಂತಹ ಪುಸ್ತಕಗಳನ್ನು ಓದಿ ತಮ್ಮ ಜ್ಞಾನ ವೃದ್ಧಿಪಡಿಸಿಕೊಳ್ಳಿ ಎಂದರು.

ಓದುಗರರಾದ ಗೌತಮ್ ಕುಮಾರಸ್ವಾಮಿ ಮಾತನಾಡಿ, ಎಲ್ಲರೂ ಪುಸ್ತಕಗಳನ್ನು ಕೊಂಡು ಓದಲು ಸಾಧ್ಯವಿಲ್ಲ. ಗ್ರಂಥಾಲಯಗಳಿರುವುದರಿಂದ ಪ್ರತಿಯೊಂದು ಪುಸ್ತಕಗಳು ಇಲ್ಲಿ ಸಿಗುವುದರಿಂದ ಪ್ರತಿಯೊಬ್ಬರು ದಿನಕ್ಕೆ ಅರ್ಧ ಗಂಟೆಯಾದರೂ ಗ್ರಂಥಾಲಯಗಳಿಗೆ ಬಂದು ತಮಗೆ ಬೇಕಾಗಿರುವಂತ ತಮ್ಮ ತಿಳುವಳಿಗೆ ಜ್ಞಾನ ಅಭಿವೃದ್ಧಿಯ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಿ ಎಂದರು.

ಈ ಕಾರ್ಯಕ್ರಮದಲ್ಲಿ ಹೊಸನಗರದ ಗ್ರಂಥಾಲಯದ ಸಿಬ್ಬಂದಿಗಳಾದ ಪ್ರಿಯಲತಾ, ರೂಪ, ಸುಶ್ಮೀತಾ, ನರೇಶ ಎಸ್ ಖಾರ್ವಿ, ಗೌತಮ್ ಕುಮಾರಸ್ವಾಮಿ, ಎನ್.ಎಸ್. ಉಡುಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment