RIPPONPETE | ಸೊಳ್ಳೆ ಸಂತತಿ ನಾಶಕ್ಕೆ ಫಾಗಿಂಗ್ ಕಾರ್ಯಾಚರಣೆ

Written by malnadtimes.com

Published on:

RIPPONPETE | ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟದಿಂದಾಗಿ ಡೆಂಘೀ (Dengue) ರೋಗದ ಉಲ್ಬಣ ಹೆಚ್ಚಾಗಿದ್ದು ಇದರಿಂದಾಗಿ ನಾಗರೀಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ರೋಗ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ಮುಂದಾಗಿದೆ.

WhatsApp Group Join Now
Telegram Group Join Now
Instagram Group Join Now

ಕಳೆದ 15-20 ದಿನಗಳಿಂದ ರಿಪ್ಪನ್‌ಪೇಟೆ ಸುತ್ತಮುತ್ತ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡು ಜ್ವರದ ಬಾಧೆಯಲ್ಲಿ ಜನತೆ ಹೈರಾಣರಾಗಿದ್ದಾರೆ. ಇದನ್ನು ಮನಗಂಡ ಗ್ರಾಮಾಡಳಿತ ಭಾನುವಾರ ಸಂಜೆ ಡೆಂಘೀ ರೋಗ ಹರಡುವಿಕೆಗೆ ಕಾರಣವಾದ ಸೊಳ್ಳೆ ಸಂತತಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ  ಪಟ್ಟಣದ ಪ್ರಮುಖ ರಸ್ತೆ ಮತ್ತು ಇತರ ಬೀದಿ, ಬಡಾವಣೆಯಲ್ಲಿ ಫಾಗಿಂಗ್ ಕಾರ್ಯಾಚರಣೆ ನಡೆಸಿದರು. ಈ ಮೂಲಕ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದು ಫಾಗಿಂಗ್ ಮೂಲಕ ಒಂದು ಹಂತದವರೆಗೆ ಡೆಂಘೀ, ಮಲೇರಿಯಾ ಬಾಧಿಸಿದ ರೋಗಿಗಳಿಗೆ ಕಚ್ಚಿದ ಸೊಳ್ಳೆಗಳನ್ನು ನಾಶಡಿಸಲು ಸಾಧ್ಯವಾಗುವುದೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಆಧಿಕಾರಿ  ಮಧುಸೂದನ್ ಮಾಧ್ಯಮದವರಿಗೆ ವಿವರಿಸಿದರು.

ರಿಪ್ಪನ್‌ಪೇಟೆಯ ಹೊಸನಗರ – ಸಾಗರ ರಸ್ತೆಯ ಮಸೀದಿ ಬಡಾವಣೆಯಲ್ಲಿ ಹೋಟೆಲ್ ಮನೆಗಳ ಕಲುಷಿತ ನೀರು ಚರಂಡಿಗೆ ಬರುತ್ತಿದ್ದು ಇದರಿಂದಾಗಿ ನೀರು ಸರಾಗವಾಗಿ ಹರಿದು ಹೋಗದೆ ಇರುವುದರಿಂದಾಗಿ ನಿವಾಸಿಗಳು ಹೈರಾಣಾಗಿದ್ದಾರೆ. ಈ ಬಗ್ಗೆ ಹೋಟೆಲ್ ಮತ್ತು ರೆಸ್ಟೋರೆಂಟ್‌ ಹಾಗೂ ಮನೆಯವರಿಗೂ ತಿಳುವಳಿಕೆ ನೋಟಿಸ್ ನೀಡುವ ಮೂಲಕ ಕಲುಷಿತ ನೀರನ್ನು ಇಂಗು ಗುಂಡಿಗೆ ಹೋಗುವಂತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಆದರೂ ಪಂಚಾಯಿತಿ ಆದೇಶವನ್ನು ಉಲ್ಲಂಘಿಸಿ ಹಲವರು ತಮ್ಮ ಹೋಟೆಲ್, ಮನೆಯ ಕಲುಷಿತ ನೀರು ಚರಂಡಿಗೆ ಹರಿಬಿಡುತ್ತಿದ್ದಾರೆಂದು ಹೇಳಿ ತಕ್ಷಣ ಇವರ ವಿರುದ್ದ ಕ್ರಮ ಜರುಗಿಸಲಾಗುವುದೆಂದು  ಗ್ರಾಮಾಡಳಿತದವರು ಮುಂಜಾಗ್ರತಾ ಕ್ರಮವಾಗಿ ಸ್ವಚ್ಚತಾ ಕಾರ್ಯಕೈಗೊಳ್ಳಲಾಗುತ್ತಿದ್ದರೂ ಕೂಡಾ ಹಲವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡಲಾಗುತ್ತಿದ್ದು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಂಚಾಯ್ತಿ ಸಿಬ್ಬಂದಿಗಳಾದ ನಾಗೇಶ್ ಮೊರೆ, ರಾಜೇಶ್, ಸಿಬ್ಬಂದಿವರ್ಗ ಹಾಜರಿದ್ದರು.

Read More

WBCIS | ಶಿವಮೊಗ್ಗ ಜಿಲ್ಲೆಯ ರೈತರೇ ಗಮನಿಸಿ, ಹವಾಮಾನಾಧರಿತ ಬೆಳೆ ವಿಮೆ ನೋಂದಣಿಗೆ ಇದು ಸಕಾಲ !

LPG Gas Price |  ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ !ಇಲ್ಲಿದೆ ಮಾಹಿತಿ

ಓಮ್ನಿ ಮತ್ತು ಬೈಕ್ ನಡುವೆ ಅಪಘಾತ, ಸವಾರ ಸ್ಥಳದಲ್ಲೇ ಸಾವು !

Leave a Comment