ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿಯಿತು ಮೂವರ ಜೀವ !

Written by malnadtimes.com

Published on:

SAGARA | ಹೊಳೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 112 ಪೊಲೀಸರು ರಕ್ಷಿಸಿದ ಘಟನೆ ಸೋಮವಾರ ಕುಗ್ವೆ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಭಾರಿ ಮಳೆಗೆ ರಸ್ತೆ ಮಧ್ಯೆ ಬಿದ್ದ ಭಾರಿ ಪ್ರಮಾಣದ ಹೊಂಡ | ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಿಪ್ಪನ್‌ಪೇಟೆ ವಿದ್ಯಾರ್ಥಿಗಳು ಆಯ್ಕೆ

ಇಲ್ಲಿನ ಅಣಲೇಕೊಪ್ಪದ 26 ವರ್ಷದ ಮಹಿಳೆ ಕೌಟುಂಬಿಕ ಕಾರಣದಿಂದ ತನ್ನ 13 ವರ್ಷದ ಮಗಳು ಹಾಗೂ 4 ವರ್ಷದ ಮಗನೊಂದಿಗೆ ಕುಗ್ವೆ ಸಮೀಪದ ಹೊಳೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸ್ಕೂಟಿಯಲ್ಲಿ ಬಂದ ಮಹಿಳೆ ಮೊಬೈಲ್ ಹಾಗೂ ಚಪ್ಪಲಿಯನ್ನು ಹೊಳೆ ಬದಿಯಲ್ಲಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಇದನ್ನು ಗಮನಿಸಿದ ಸ್ಥಳೀಯರು ಮಹಿಳೆಯನ್ನು ಸಮದಾನಪಡಿಸಿ ಬುದ್ದಿ ಹೇಳಿದ್ದಾರೆ.

ಇದ್ಯಾವುದನ್ನು ಕೇಳುವ ಸ್ಥಿತಿಯಲ್ಲಿಲ್ಲದ ಮಹಿಳೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ, ನಂತರ ಸ್ಥಳೀಯರು 112 ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

ತಕ್ಷಣ ದೂರು ಸ್ವೀಕರಿಸಿಕೊಂಡು 112 ವಾಹನದ ಅಧಿಕಾರಿ ಹೆಡ್ ಕಾನ್ಸ್‌ಟೇಬಲ್ ಶಿವರುದ್ರಯ್ಯ ಹಾಗೂ ಚಾಲಕ ಶಿವಾನಂದ್ ಸ್ಥಳಕ್ಕಾಗಮಿಸಿದ್ದಾರೆ. ಅಷ್ಟರಲ್ಲಾಗಲೇ ಮಹಿಳೆ ಹಾಗೂ ಮಗು ನೀರಿಗೆ ಇಳಿದ್ದಿದ್ದರು ಪೊಲೀಸರು ಇವರನ್ನು ರಕ್ಷಿಸಿ ತಮ್ಮ ವಾಹನದಲ್ಲೇ ಪೇಟೆ ಠಾಣೆಗೆ ಕರೆ ತಂದಿದ್ದಾರೆ.

112 ಪೊಲೀಸರ ತ್ವರಿತ ಕಾರ್ಯಾಚರಣೆಯಿಂದಾಗಿ ಮೂವರ ಜೀವ ಉಳಿದಂತಾಗಿದೆ.

Leave a Comment