ಕೆಂಜಿಗಾಪುರ ಶ್ರೀಧರ್ ಭಟ್ ಮನೆಯಲ್ಲಿ ಕಳ್ಳತನ ! ಒಂದೇ ವಾರದಲ್ಲಿ ಎರಡೆರಡು ಬಾರಿ ಕಳ್ಳತನ !! ಪುರೋಹಿತರ ಕೈ,ಕಾಲು ಕಟ್ಟಿಹಾಕಿ 4 ಲಕ್ಷಕ್ಕೂ ಅಧಿಕ ಹಣ ರಾಬರಿ …!!!

ಸಾಗರ: ತಾಲೂಕಿನ ಆನಂದಪುರ ಸಮೀಪದ ಕೆಂಜಿಗಾಪುರದ ಶ್ರೀಧರ್ ಭಟ್ ರವರ ಮನೆಗೆ ನುಗ್ಗಿದ ದರೋಡೆಕೋರರು ನಾಲ್ಕು ಲಕ್ಷಕ್ಕೂ ಅಧಿಕ ಹಣ ಹಾಗೂ ಎರಡು ಮೊಬೈಲ್ ಅನ್ನು ದರೋಡೆಗೈದಿದ್ದಾರೆಂದು ಪುರೋಹಿತರಾದ ಶ್ರೀಧರ್ ಭಟ್ ರವರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಫೆ.20 ಎಂದು ರಾತ್ರಿ 11:45ರ ವೇಳೆಗೆ ಶ್ರೀಧರ್ ಭಟ್ ರವರು ಬೇರೆ ಊರಿನಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಬಂದಾಗ ದರೋಡೆಕೋರರು ತಮ್ಮ ಮನೆಗೆ ನುಗ್ಗಿ ಶ್ರೀಧರ್ ಭಟ್ ರವರನ್ನು ಹಾಗೂ ಅವರ ಅಕ್ಕರನ್ನು ಕೈ ಕಾಲು ಕಟ್ಟಿ ಹಾಕಿ ಅವರ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಹಣವನ್ನು ದೋಚಿದ್ದಾರೆ ಹಾಗೂ ಜೊತೆಗೆ ಎರಡು ಮೊಬೈಲನ್ನು ದೋಚಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆಂಜಿಗಾಪುರ ನಿವಾಸಿ ಪುರೋಹಿತರಾದ ಶ್ರೀಧರ್ ಭಟ್ ರವರದ್ದು ಒಂಟಿ ಮನೆಯಾಗಿದ್ದು ಇದೀಗ ಒಂದು ವರ್ಷದ ಒಳಗೆ ಮೂರನೇ ಬಾರಿ ದರೋಡೆಕೋರರು ದರೋಡೆ ನಡೆಸಿದ್ದಾರೆ.

ಮೊದಲ ಘಟನೆ :

ಶ್ರೀಧರ್ ಭಟ್ಟರು ಎಂಬ 75 ವರ್ಷದ ಹಿರಿಯರು ನೀಡಿದ ದೂರಿನ ಅಡಿಯಲ್ಲಿ ಐಪಿಸಿ 394 ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಈ  ಪ್ರಕಾರ ಮೊದಲ ರಾಬರಿ ಫೆ. 12 ರಂದು ನಡೆದಿದೆ. ಅವತ್ತು ತಡರಾತ್ರಿ 3 ಗಂಟೆ ಸುಮಾರಿಗೆ ನಾಲ್ಕು ಜನ ಮನೆ ಹಂಚಿನಿಂದ ಇಳಿದು ಬಂದು, ವಯಸ್ಸಾದ ಭಟ್ಟರನ್ನು ಹಾಗೂ ಅವರ ಅಕ್ಕನ ಕೈಕಾಲು ಕಟ್ಟಿ ಹಾಕಿ ನಾಲ್ಕೈದು ಲಕ್ಷ ರೂಪಾಯಿ ರಾಬರಿ ಮಾಡಿ ಹೋಗಿದ್ದಾರೆ. ಮೇಲಾಗಿ ಪೊಲೀಸರಿಗೆ ತಿಳಿಸಿದರೇ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ

ಎರಡನೇ ಘಟನೆ :

ಶ್ರೀಧರ್ ಭಟ್ಟರು ಭಯದಲ್ಲಿ, ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಈ ನಡುವೆ ಫೆ.20 ರಂದು ಮತ್ತೊಂದು ಸಲ ಇವರ ಮನೆಯಲ್ಲಿಯೇ ಕಳ್ಳತನ ನಡೆದಿದೆ ಅಂದರೆ ಕೇವಲ ಏಳು ದಿನದ ಅಂತರದಲ್ಲಿ ಎರಡನೇ ಸಲ ಇದೇ ರೀತಿ ಆಗಿದೆ. ಈ ಸಲ ಮನೆಯ ಕೊಟ್ಟಿಗೆ ಬಳಿ ಮೊದಲೇ ಅವಿತು ನಿಂತಿದ್ದ  ನಾಲ್ಕು ಜನ  ಶ್ರೀಧರ್ ಭಟ್ ರನ್ನ ಕಟ್ಟಿ ಹಾಕಿ ಅವರ ಅಕ್ಕನ ಮೇಲೆ ಹಲ್ಲೆ ಮಾಡಿ ಒಂದು ಲಕ್ಷ ರೂಪಾಯಿಯನ್ನ ದರೋಡೆ ಮಾಡಿಕೊಂಡು ಹೋಗಿದ್ದಾರೆ. 

ತಮಿಳುನಾಡು ರಿಜಿಸ್ಟ್ರೇಷನ್ ಕಾರಿನ ಮೇಲೆ ಅನುಮಾನ

ಇನ್ನೂ  ನೀಡಿದ ದೂರಿನಲ್ಲಿ ಭಟ್ಟರು, ತಮಿಳುನಾಡು ರಿಜಿಸ್ಟ್ರೇಷನ್ ನಂಬರ್ ಇರುವ ಕಾರಿನ ಬಗ್ಗೆ ಹೇಳಿದ್ದು, ಆ ಕಾರು ಮನೆಯ ಬಳಿ ನಿಂತಿತ್ತು. ಅವರನ್ನ ಕೇಳಿದಾಗ, ಹುಣ್ಣಿಮೆಯ ಪೂಜೆಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಕಂಪ್ಲೆಂಟ್ ಕೊಟ್ಟಿದ್ದಾರೆ. ಶಿವಮೊಗ್ಗ ಪೊಲೀಸ್ ಇಲಾಖೆ ವಿಮಾನ ನಿಲ್ದಾಣ ಉದ್ಘಾಟನೆಯ ಭದ್ರತೆಯಲ್ಲಿ ಬ್ಯುಸಿಯಾಗಿದೆ.ಇದರ ನಡುವೆ ಸಾಗರ ತಾಲ್ಲೂಕಿನಲ್ಲಿ ಈ ರಾಬರಿ ಪ್ರಕರಣ ಹೊರಕ್ಕೆ ಬಂದಿದೆ. ಒಂದೇ ಮನೆಯನ್ನು ವಾರದಲ್ಲಿಎರಡು ಸಲ ಟಾರ್ಗೆಟ್ ಮಾಡಿ ರಾಬರಿ ಮಾಡಿರುವುದು ಆತಂಕ ಮೂಡಿಸ್ತಿದೆ ಅಲ್ಲದೆ ಆರೋಪಿಗಳಿಗೆ ಜಾಗ, ಮನೆ, ವ್ಯಕ್ತಿಯ ಪರಿಚಯ ಇರುವ ಸಾಧ್ಯತೆ ಹೇಳುತ್ತಿದೆ.

2021 ರಲ್ಲಿಯು ಕಳ್ಳತನ ನಡೆದಿತ್ತು !

ಇನ್ನೊಂದು ಅಚ್ಚರಿಯ ಸಂಗತಿ ಅಂದರೆ, ಇದೇ  ಶ್ರೀಧರ್ ಭಟ್ ಮನೆಯಲ್ಲಿ 2021ರಲ್ಲಿ ಹಾಡಹಗಲೇ ಕಳ್ಳತನ ನಡೆದಿತ್ತು. ಅಂದು ಸಹ ಈ ವಿಷಯ ದೊಡ್ಡಮಟ್ಟಿಗೆ ಸದ್ದು ಮಾಡಿತ್ತು. ಕೆಂಜಿಗಾಪುರದ ಗ್ರಾಮದಲ್ಲಿ ಸುತ್ತಮುತ್ತ ಜನವಸತಿ ಇಲ್ಲದ ಒಂಟಿಮನೆಯಲ್ಲಿ ವಾಸಿಸುತ್ತಿರುವ ಶ್ರೀಧರ್ ಭಟ್ ರ ಮನೆಗೆ ನುಗ್ಗಿದ್ದ  ನಾಲ್ಕು ಜನರು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು. ಅಂದು ಭಟ್ಟರ ಸಹೋದರಿ ಮೇಲೆ ಹಲ್ಲೆ ಮಾಡಿ, 2 ಲಕ್ಷ ರೂಪಾಯಿ ದೋಚಿ ಹೋಗಿದ್ದರು. ಆಗಲೂ ಸಾಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೇಸ್ ಮಾಡಿದ್ದರು.  ಇನ್ನೂ ಸ್ಥಳೀಯರ ಪ್ರಕಾರ, ಈ ಕೇಸ್ ಗೂ ಮೊದಲೇ ಎರಡು ಸಲ ಭಟ್ಟರ ಮನೆಯಲ್ಲಿ ರಾಬರಿ ಯತ್ನ ನಡೆದಿತ್ತು. ಇದೀಗ ಮತ್ತೆ ವಾರದಲ್ಲಿ ಎರಡು ಸಲ ಕೃತ್ಯ ನಡೆದಿದೆ. ಈ ಸಲ ಆರೋಪಿಗಳಿಗೆ ಪೊಲೀಸರು ಕೋಳ ತೊಡಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. 

Related Articles

LEAVE A REPLY

Please enter your comment!
Please enter your name here

Stay Connected

0FansLike
3,747FollowersFollow
0SubscribersSubscribe
- Advertisement -spot_img

Latest Articles

error: Content is protected !!