ಶ್ರೀಗಂಧ ಕಳ್ಳ ಸಾಗಾಣಿಕೆ ; ಬೈಕ್ ಸಹಿತ ಆರೋಪಿ ಬಂಧನ

Written by Mahesha Hindlemane

Published on:

ತೀರ್ಥಹಳ್ಳಿ ; ಸಾಗರ ವಲಯ ಅರಣ್ಯ ಸಂಚಾರಿ ದಳ ಹಾಗೂ ತೀರ್ಥಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಬೆಜ್ಜವಳ್ಳಿ ಸಮೀಪ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ, ಶ್ರೀಗಂಧ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಆರೋಪಿ ಬಂಧನಕ್ಕೊಳಗಾದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮುಕ್ಬಲ್ (56) ಎಂಬುವನು 14.300 ಗ್ರಾಂ ಶ್ರೀಗಂಧವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಆತನನ್ನು ತಡೆದು ಬಂಧಿಸಿದರು. ನಂತರ ಪ್ರಕಾರಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತಾದರೆ, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಈ ಕಾರ್ಯಾಚರಣೆಯಲ್ಲಿ ಸಾಗರ ವಲಯ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ ಹಾಗೂ ಸಿಬ್ಬಂದಿ ವರ್ಗ, ಜೊತೆಗೆ ತೀರ್ಥಹಳ್ಳಿ ಅರಣ್ಯಾಧಿಕಾರಿಗಳು ಭಾಗವಹಿಸಿ ಯಶಸ್ವಿ ದಾಳಿ ನಡೆಸಿದ್ದಾರೆ.

Leave a Comment