ರಂಭಾಪುರಿ ಪೀಠದಲ್ಲಿ ಜ. 19 ರಿಂದ 21ರವರೆಗೆ ಶತರುದ್ರಯಾಗ ಪೂಜಾ ಕಾರ್ಯಕ್ರಮ

Written by malnadtimes.com

Published on:

ಬಾಳೆಹೊನ್ನೂರು ; ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಜನವರಿ 19ರಿಂದ 21ರವರೆಗೆ ಶತರುದ್ರಯಾಗ ಪೂಜಾ ಕಾರ್ಯಕ್ರಮವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.

WhatsApp Group Join Now
Telegram Group Join Now
Instagram Group Join Now

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿಗಳಾದ ಬೆಳಗಾಲಪೇಟೆ ವೇ.ಸಿದ್ಧಲಿಂಗಯ್ಯ ಶಾಸ್ತಿçಗಳು ಮತ್ತು ಗುರುಕುಲ ಸಾಧಕರ ವೈದಿಕತ್ವದಲ್ಲಿ ಜ‌. 19ರಂದು ನವಪದರುದ್ರ ಕಲಶ ಮಂಡಲ ಸ್ಥಾಪನೆ, ಆರಾಧನೆ, ದಶಶಕ್ತಿ ಮಹಾಕಲಶ ಪೂಜಾ, ದಶಪಾಲಕ ರುದ್ರನ ಆರಾಧನ, ರುದ್ರ ಪರಿವಾರ ಸಮೇತ ಪರಬ್ರಹ್ಮರುದ್ರ ಕಲಶ ಪೂಜಾ, ಗಣಹೋಮ, ವೀರಭದ್ರ ಹೋಮ, ಪೂರ್ಣಾಹುತಿ ಮಹಾಮಂಗಲ, ಜ. 20ರಂದು ಶತರುದ್ರಹೋಮ ಪೂರ್ಣಾಹುತಿ ಮಹಾಮಂಗಲ ಸಾಯಂಕಾಲ ಲಕ್ಷ ಶಿವಪಂಚಾಕ್ಷರಿ ಮಂತ್ರ ಜಪ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಶಿವನಾಮ ಸ್ಮರಣೆ ಹಾಗೂ ಶಿವಭಜನೆ ಹಾಗೂ ಜ. 21ರಂದು ರುದ್ರ ಪರಿವಾರ ಕಲಶ ಸಮೇತ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯ ಮಂಗಲ ಮೂರ್ತಿಗೆ ಶತರುದ್ರಾಭಿಷೇಕ ರಾಜೋಪಚಾರ ಪೂಜಾ ಅಷ್ಟೋತ್ತರ ಮಹಾನೈವೇದ್ಯ ನಂತರ ಮಹಾಮಂಗಲ ಜರುಗುವುದು.

ದಿನ ನಿತ್ಯ ಪ್ರಾಥಃಕಾಲ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಸೋಮೇಶ್ವರ ಮಹಾಲಿಂಗ ಹಾಗೂ ಶಕ್ತಿತ್ರಯ ದೇವಿಗೆ ವಿಶೇಷ ಪೂಜೆ ನಡೆಯುವುದು.

ಧರ್ಮಾಭಿಮಾನಿಗಳು ಮೇಲ್ಕಂಡ ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಶ್ರೀ ಪೀಠದ ಪ್ರಕಟಣೆ ತಿಳಿಸಿದೆ.

Leave a Comment