ಬೊಮ್ಮನಕಟ್ಟೆಯಲ್ಲಿ ಎ*ಣ್ಣೆ ಪಾರ್ಟಿಯ ನಡುವೆ ನಡೆದ ಜಗಳ; ಯುವಕನ ಬರ್ಬರ ಹ*ತ್ಯೆ

Written by Koushik G K

Published on:

ಶಿವಮೊಗ್ಗ– ನಗರದ ಹೊರವಲಯ ಬೊಮ್ಮನಕಟ್ಟೆ ಇ-ಬ್ಲಾಕ್ ನಲ್ಲಿ ಎಣ್ಣೆ ಪಾರ್ಟಿಯ ನಡುವೆ ನಡೆದ ಜಗಳವು ಯುವಕನ ಬರ್ಬರ ಹ*ತ್ಯೆಗೆ ಕಾರಣವಾಗಿರುವ ಭಯಾನಕ ಘಟನೆ ಗುರುವಾರ ರಾತ್ರಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಹ*ತ್ಯೆಯಾದ ವ್ಯಕ್ತಿಯನ್ನು ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಎಂದು ಗುರುತಿಸಲಾಗಿದೆ. ಹ*ತ್ಯೆ ಆರೋಪಿಯನ್ನಾಗಿ ಪವನ್‌ನ ಸ್ನೇಹಿತ ಶಿವಕುಮಾರ್ ಗುರುತಿಸಲಾಗಿದ್ದು, ಪೊಲೀಸರ ವಶದಲ್ಲಿದ್ದಾನೆ.

ಮಾಹಿತಿಯ ಪ್ರಕಾರ, ಗುರುವಾರ ರಾತ್ರಿ ಪವನ್ ತನ್ನ ಸ್ನೇಹಿತ ಶಿವಕುಮಾರ್‌ನ ಮನೆಗೆ ಎ*ಣ್ಣೆ ಪಾರ್ಟಿಗೆ ತೆರಳಿದ್ದ. ಪಾರ್ಟಿಯ ಮಧ್ಯೆ ಇಬ್ಬರ ನಡುವೆ ಏನೋ ವಿಷಯಕ್ಕೆ ಮಾತಿನ ಚಕಮಕಿ ಜಗಳಕ್ಕೆ ತಿರುಗಿದ ನಂತರ, ಶಿವಕುಮಾರ್ ತನ್ನ ಮನೆಯಲ್ಲಿ ಪವನ್‌ನನ್ನು ಬರ್ಬರವಾಗಿ ಕೊ*ಲೆ ಮಾಡಿದ್ದಾನೆ.

ಘಟನೆ ಸಂಭವಿಸಿದ ಸ್ಥಳ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿ ಒಳಪಟ್ಟಿದ್ದು, ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಡಿವೈಎಸ್ಪಿ ಸಂಜೀವ್ ಕುಮಾರ್, ಬೆರಳಚ್ಚು ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.

Leave a Comment