ಕೋಡೂರು ; ಕಾರಕ್ಕಿ ಗ್ರಾಮದಲ್ಲಿ ಅರಣ್ಯ ನಾಶ – ಕಣ್ಮುಚ್ಚಿ ಕುಳಿತಿರುವ ಇಲಾಖೆ

0 133


– ತಾಲ್ಲೂಕಿನಾದ್ಯಂತ ಸಾವಿರಾರು ಎಕರೆ ಅರಣ್ಯ ನಾಶವಾಗುತ್ತಿದ್ದರೂ ಕೇಳುವರ‍್ಯಾರು ಗತಿಯಿಲ್ಲ..!
– ಸದ್ಯದಲ್ಲಿಯೇ ಲೋಕಾಯುಕ್ತಕ್ಕೆ ದೂರು ; ಗಿರೀಶ್ ಆಚಾರ್..!!

ಹೊಸನಗರ: ತಾಲ್ಲೂಕಿನ ಕೋಡೂರು ಗ್ರಾ.ಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಜಾಗವನ್ನು ಸರ್ವೆ ನಂಬರ್ 11ರಲ್ಲಿ ಲಕ್ಷ-ಲಕ್ಷ ರೂಪಾಯಿಗಳಿಗೆ ಅರಣ್ಯ ಭೂಮಿ ಮಾರಾಟ ಮಾಡುವ ದಂಧೆ ಹಾಗೂ ರಾತ್ರಿ ಬೆಳಗಾಗುವ ಒಳಗೆ ದೊಡ್ಡ-ದೊಡ್ಡ ಮರಗಳನ್ನು ಕಡಿದು ಜೆಸಿಬಿ ಯಂತ್ರದ ಮೂಲಕ ಟ್ರಂಚ್ ಮಾಡಿ ಅಡಿಕೆ ಗಿಡಗಳನ್ನು ನೆಡುತ್ತಿದ್ದರೂ ಅರಣ್ಯ ಇಲಾಖೆಯಾಗಲಿ ಸಂಬಂಧಪಟ್ಟ ಅಧಿಕಾರಿಯಾಗಲಿ ಊರಿನ ನಾಗರೀಕರಾಗಲಿ ಕೇಳುವವರು ಗತಿಯಿಲ್ಲ ಎಂದು ಜನ ಸಂಗ್ರಾಮ ಪರಿಷತ್ ಜಿಲ್ಲಾ ಸಂಘಟಕರಾದ ಗಿರೀಶ್ ಆಚಾರ್‌ರವರು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಬಲಾಢ್ಯರು ಸರ್ಕಾರದ ಕಂದಾಯ, ಅರಣ್ಯ ಭೂಮಿಯನ್ನು ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದವರಂತೆ ವರ್ತಿಸುತ್ತಿದ್ದಾರೆ. ಆ ಭಾಗದ ಅರಣ್ಯ ರಕ್ಷಕರು ವಿಷಯ ತಿಳಿದಿದ್ದರೂ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಿಲ್ಲ ಎಂದು ಆರೋಪಿಸಿದರು.

ಹೊಸನಗರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಜಾಗ ಎಲ್ಲೆಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಎಕರೆ ಗಟ್ಟಲೇ ತೋಟ ಮಾಡಿರುವ ಬಗ್ಗೆ ನನ್ನ ಬಳಿ ಮಾಹಿತಿಯಿದ್ದು ಅವುಗಳನ್ನು ಲೋಕಾಯುಕ್ತ ಕೋರ್ಟ್‌ಗೆ ಹಾಕಲಾಗುವುದು ಎಂದರು.

Leave A Reply

Your email address will not be published.

error: Content is protected !!