ದೇಶದ ಉತ್ತಮ ಪ್ರಜೆಯಾಗಿ ಬದುಕಿದರೆ ಅದೇ ಒಬ್ಬ ಶಿಕ್ಷಕನಿಗೆ ವಿದ್ಯಾರ್ಥಿಗಳು ನೀಡುವ ಕೊಡುಗೆ

0 79


ಹೊಸನಗರ: ಶಿಕ್ಷಕರು ಮೊದಲು ವೃತ್ತಿಗೆ ಬರುವಾಗ ಕೆಲಸ ಸಿಕ್ಕಿದರೇ ಸಾಕು ಎಂಬ ಹಂಬಲದೊಂದಿಗೆ ನಮ್ಮ ಸಂಸಾರ ನಡೆಸಲು ದಾರಿ ದೀಪವಾಗಿದೆ ಎಂಬ ವಿಶ್ವಾಸದಿಂದ ಶಿಕ್ಷಕರ ವೃತ್ತಿಗೆ ಆಗಮಿಸುತ್ತಾರೆ. ಆದರೆ ವೃತ್ತಿಗೆ ಬಂದ ಮೇಲೆ ನಮ್ಮ ಜವಾಬ್ದಾರಿ ತುಂಬವಿದೆ ಎಂಬ ಆರಿವಾಗುತ್ತದೆ ಎಂದು ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಬೇರಪ್ಪನವರು ಹೇಳಿದರು.


ಹೊಸನಗರ ತಾಲ್ಲೂಕು ಗವಟೂರು ಹಿರಿಯ ಮುಖ್ಯ ಶಿಕ್ಷಕ ನಾರಾಯಣಪ್ಪರವರು ವಯೋನಿವೃತ್ತಿ ಪಡೆದಿದ್ದು ಅವರನ್ನು ಬಡ್ತಿ ಶಿಕ್ಷಕರ ಸಂಘದವತಿ ಇಂದ ಶಾಲೆಯ ಆವರಣದಲ್ಲಿ ಸನ್ಮಾನಿಸಿ ಮಾತನಾಡಿ, ಬರೀ ನಮ್ಮ ಜೀವನ ನಮ್ಮ ಸಂಸಾರ ಮಾತ್ರ ಚೆನ್ನಾಗಿದ್ದರೇ ಸಾಲದು ನಮ್ಮಿಂದ ವಿದ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ಹಾಗೂ ನಾವು ಶಿಕ್ಷಕರಾಗಿ ಸೇವೆ ಸಲ್ಲಿಸುವ ಶಾಲೆಗೆ ಒಳ್ಳೆಯದಾಗಬೇಕು ಎಂಬ ಭಾವನೆಯೊಂದಿಗೆ ಸೇವೆ ಸಲ್ಲಿಸಬೇಕು‌. ನಾವು ಕಲಿಸುವ ವಿದ್ಯಾರ್ಥಿಗಳು ಈ ದೇಶದ ಒಳ್ಳೆಯ ಪ್ರಜೆಯಾಗಿ ಒಳ್ಳೆಯ ವ್ಯಕ್ತಿಯಾಗಿ ರೂಪಗೊಳಿಸುವ ಹಗಲಿರೂಳು ಚಿಂತಿಸಬೇಕು ಹಾಗೂ ಶಿಕ್ಷಕನಾಗಿ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿಗಳು ಶಿಸ್ತು ಸಂಯಮವನ್ನು ಶಾಲೆಯಲ್ಲಿ ಕಲಿಯುವುದಕ್ಕೆ ಶಿಕ್ಷಕರೆ ಪ್ರೇರಣೆಯಾಗಬೇಕು, ನಾವು ಕಲಿಸುವ ವಿದ್ಯಾರ್ಥಿಗಳಲ್ಲಿ ಎಲ್ಲರೂ ಬುಧ್ಧಿವಂತರಾಗಬೇಕಾಗಿಲ್ಲ ಅಥವಾ ಸರ್ಕಾರಿ ಹುದ್ದೆ ಪಡೆಯಬೇಕಿಂತಿಲ್ಲ. ಅದರಲ್ಲಿ ಅಲ್ಪ ಪ್ರಮಾಣದ ವಿದ್ಯಾರ್ಥಿಗಳು ಸರ್ಕಾರಿ ಇತರೆ ಕೆಲಸಕ್ಕೆ ಹೋದರೆ ಸಾಕು ಆದರೆ ನಾವು ಕಲಿಸಿರುವ ಪಾಠ ಮುಂದಿನ ಪೀಟಿಗೆಗೆ ಪ್ರೇರಣೆಯಾಗಬೇಕು ಅದರ ಜೊತೆಗೆ ಈ ದೇಶದ ಉತ್ತಮ ಪ್ರಜೆಯಾಗಿ ಬದುಕಿದರೆ ಒಬ್ಬ ಶಿಕ್ಷಕನಿಗೆ ವಿದ್ಯಾರ್ಥಿಗಳು ನೀಡುವ ಕೊಡಿಗೆಯಾಗಿರುತ್ತದೆ. ಆದ್ದರಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಮೊದಲು ನಮ್ಮ ಜೀವನವನ್ನು ಸರಿಯಾದ ಜವಾಬ್ದಾರಿಯಲ್ಲಿ ತೆಗೆದುಕೊಂಡು ಹೋದಾಗ ಮಕ್ಕಳಿಗೆ ನೀತಿ ಪಾಠ ಹೇಳಲು ಸಹಕಾರಿಯಾಗುತ್ತದೆ ಎಂದರು.


ಬಡ್ತಿ ಶಿಕ್ಷಕರ ಸಂಘದ ಮುಖ್ಯ ಶಿಕ್ಷಕ ಸಂಘದ ಶಿಕ್ಷಕರಾದ ದುಗ್ಗಪ್ಪ, ಲಿಲ್ಲಿ ಡಿಸೋಜ, ಶಾರದಮ್ಮ, ಸತೀಶ, ಬಿ. ದೇವೆಂದ್ರಪ್ಪ, ಗಣಪತಿ, ರೇಣುಕಪ್ಪ, ಮಂಜಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಪ್ರಕಾಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!