ನೇತ್ರದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿ

0 39


ರಿಪ್ಪನ್‌ಪೇಟೆ: ನೇತ್ರದಾನ ಶ್ರೇಷ್ಟದಾನ ಇದರಿಂದಾಗಿ ಅಂದರ ಬಾಳಿಗೆ ಬೆಳಕಾಗಲು ಇಂದಿನ ಜನಸಮೂಹದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮೃತರಾದವರ ಕಣ್ಣುಗಳನ್ನು ಮಣ್ಣು ಮಾಡುವುದು ಮತ್ತು ಬೆಂಕಿಗಾಹುತಿ ಮಾಡುವ ಬದಲು ಅವರ ನೇತ್ರಗಳನ್ನು ದಾನ ಮಾಡುವುದರಿಂದ ಇಬ್ಬರ ಬಾಳಿಗೆ ಬೆಳಕು ನೀಡಿದಂತಾಗುತ್ತದೆಂದು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಬೃಂದನಾಯ್ಕ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಮತ್ತು ಯುವರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಐಕ್ಯೂಎಸಿ ಮತ್ತು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಲಾದ
“ಉಚಿತ ನೇತ್ರ ತಪಾಸಣೆ ಮತ್ತು ನೇತ್ರದಾನ ಪ್ರತಿಜ್ಞಾ ಶಿಬಿರ’’ವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಚಾರ್ಯ ಟಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಶಂಕರ ಕಣ್ಣಿನ ಅಸ್ಪತ್ರೆಯ ವೈದ್ಯರಾದ ಆರ್.ಎಸ್.ಪ್ರದೀಪ, ಐಕ್ಯೂ ಎಸಿ ಸಂಚಾಲಕ ಸರೇಂದ್ರಕುಳಗಟ್ಟೆ, ಯುವರೆಡ್‌ಕ್ರಾಸ್ ಸಂಚಾಲಕ ಹರ್ಷಕುಮಾರ್, ಎನ್.ಎಸ್.ಎಸ್.ಘಟಕದ ಕಾರ್ಯಕ್ರಮಾಧಿಕಾರಿ ಆರ್.ದೇವರಾಜ್ ಮತ್ತು ಶಿಲ್ಪಾ ಪಾಟೀಲ್ ಇನ್ನಿತರರು ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿ ಸಹನಾ ಸ್ವಾಗತಿಸಿದರು. ಕೀರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave A Reply

Your email address will not be published.

error: Content is protected !!