ಪರಿಸರ ವಿನಾಶಕ್ಕೆ ಮಾನವನ ಅತಿಯಾಸೆ ಕಾರಣ ; ನ್ಯಾಯಾಧೀಶ ಕೆ ರವಿಕುಮಾರ್ ಅಭಿಮತ

0 49

ಹೊಸನಗರ : ಮನುಷ್ಯರ ಅವಿವೇಕತನ ಅತಿಯಾಸೆಯಿಂದ ಪರಿಸರ ನಾಶವಾಗುತ್ತಿರುವುದಕ್ಕೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ವ್ಯವಹಾರ ನ್ಯಾಯಾಧೀಶ ಕೆ ರವಿಕುಮಾರ್ ತಮ್ಮ ಅಭಿಮತ ವ್ಯಕ್ತಪಡಿಸಿದರು.

ಹೊಸನಗರದ ನ್ಯಾಯಾಲಯದ ಆವರಣದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವದ ಅಂಗವಾಗಿ ಹೊಸನಗರ ಅರಣ್ಯ ಇಲಾಖೆ ಮತ್ತು ನ್ಯಾಯಾಲಯದ ಸಹಭಾಗಿತ್ವದಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿ, ಪ್ರತಿಯೊಬ್ಬರು ವರ್ಷಕ್ಕೊಂದರಂತೆ ಗಿಡ ನೆಡುವ ಹವ್ಯಾಸ ಬೆಳೆಸಿದರೆ ಅಪರಿಮಿತ ವೃಕ್ಷ ಸಂಪತ್ತನ್ನು ನಾವು ಪಡೆಯಬಹುದಾಗಿದೆ ಎಂದರು.

ಪರಿಸರ ನಾಶ ವಿನಾಶಕ್ಕೆ ಕಾರಣವಾಗಲಿದ್ದು ಅದರ ಪರಿಣಾಮ ಮುಂದಿನ ಪೀಳಿಗೆಗೆ ಅವರ ಭವಿಷ್ಯತೆಗೆ ಗಂಭೀರ ಪರಿಣಾಮ ಆಗಲಿದ್ದು ಅದನ್ನು ತಪ್ಪಿಸಲು ಪ್ರತಿಯೊಬ್ಬರು ವೃಕ್ಷ ಸಂಪತ್ತನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

ಒಬ್ಬ ಮನುಷ್ಯ ವರ್ಷಕ್ಕೆ ಒಂದು ಗಿಡದಂತೆ ನೆಟ್ಟು ಆರೈಕೆ ಮಾಡಿದರೃ ಅವರ ಸಾಮಾನ್ಯ ಜೀವಿತವಾಧಿ 60 ವರ್ಷಗಳೆಂದು ತಿಳಿದುಕೊಂಡರೂ 60 ಗಿಡಗಳನ್ನು ನೆಡಬಹುದು ಆದರೆ ನಾನು ನೆಟ್ಟ ಗಿಡವನ್ನು ಮರವಾಗಿ ಮಾಡುವ ಹೊಣೆಗಾರಿಕೆ ಹೊಂದಿರಬೇಕು ಎಂದರು.


ಇಂದು ವಿಶ್ವ ಪರಿಸರ ದಿನ, ಪರಿಸರದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ ಪ್ರತಿ ವರ್ಷ ವಿಬಿನ್ನ ಧ್ಯೇಯದೊಂದಿಗೆ ಆಚರಿಸಲಾಗುತ್ತಿದ್ದು ಈ ಬಾರಿಯ ವಿಶೇಷ ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ನಾವು ಮಾಡಬೇಕಾಗಿದೆ. ಇಂದು ಪ್ಲಾಸ್ಟಿಕ್ ಬಳಕೆ ಮೀರಿದೆ ಪ್ಲಾಸ್ಟಿಕ್ ಬಳಕೆ ಇಲ್ಲದ ದಿನವನ್ನು ಊಹಿಸಲು ಸಾಧ್ಯವಿಲ್ಲ. ಆಹಾರದಿಂದ ಹಿಡಿದು ಬಟ್ಟೆಯ ಪ್ಯಾಕ್‌ವರೆಗೆ ಪ್ಲಾಸ್ಟಿಕ್ ಎಲ್ಲಡೆ ವ್ಯಾಪಿಸಿದೆ ಸುಲಭವಾಗಿ ಕರಗದ ಇದು ಜೀವ ವೈವಿಧ್ಯಕ್ಕೆ ಮಾರಕವಾಗಿದೆ ಇದನ್ನು ನಮ್ಮ ಭಾರತ ದೇಶದಿಂದ ಕಿತ್ತೊಗೆಯಬೇಕಾಗಿದೆ ನಾವು ನಿವೇಲ್ಲರೂ ಸೇರಿ ಪರಿಸರ ಉಳಿಸುವುದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ಭಾರತ ದೇಶವನ್ನಾಗಿ ಮಾಡೋಣ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್ ಪ್ರಕಾಶ್ ಮಾತನಾಡಿ, ಅರಣ್ಯ ಸಂರಕ್ಷಣೆ ಎಲ್ಲರ ಹೊಣೆ ಪರಿಸರ ನಾಶವಾದರೆ ಇಡಿಯ ವಿಶ್ವವೇ ಗಂಭೀರ ಪರಿಣಾಮ ಎದುರಿಸಬೇಕಾದ ಕಾರಣ ಪ್ರತಿಯೊಬ್ಬರ ವೃಕ್ಷ ಸಂಕುಲ ರಕ್ಷಣೆಯಲ್ಲಿ ತೊಡಗಬೇಕೆಂದರು.


ಈ ಸಂದರ್ಭ ನ್ಯಾಯಾಲಯದ ಶಿರಾಸ್ತೆದಾರ್ ನೇತ್ರಾವತಿ,  ಭಾಗ್ಯ, ಎ.ಪಿ.ಪಿ ಗೋಪಾಲ್ ವಕೀಲರ ಸಂಘದ ಅಧ್ಯಕ್ಷರಾದ ವಾಲೇಮನೆ ಶಿವಕುಮಾರ್, ವಕೀಲರಾದ ಹಿರಿಯಪ್ಪ, ಗುರು ಮಂಡಾನಿ, ಅರಣ್ಯ ಇಲಾಖೆಯ ಎಸಿಎಫ್ ಪ್ರಕಾಶ್ ಕೆ.ಜಿ, ಆರ್‌ಎಫ್‌ಓ ರಾಘವೇಂದ್ರ, ಷಣ್ಮುಖ ಪಾಟೇಲ್, ನರೆಂದ್ರಕುಮಾರ್  ಶಶಿಕುಮಾರ್, ಪ್ರಮೋದ್, ಜಗದೀಶ್, ಚಂದ್ರಪ್ಪ, ಷಣ್ಮಖಪ್ಪ, ರೇಖಾ ಹರೀಶ್, ಗುರುಕಿರಣ್, ಬಸವರಾಜ್ ಗಗ್ಗ, ಮಹೇಶ್ ವೈ.ಪಿ, ಗುರು ಇನ್ನೂ ಮುಂತಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!