ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ದೇಶ ಸುಭದ್ರವಾಗಿದೆ: ಎರಗಿ ಉಮೇಶ್

0 40


ಹೊಸನಗರ: ಪುರುಷ ಪ್ರಧಾನ ಸಮಾಜವಾದ ಭಾರತ ದೇಶದಲ್ಲಿ ಪುರುಷರಂತೆ ಮಹಿಳೆಯರು ಸಮಾನವಾಗಿ ದುಡಿಯುತ್ತಿರುವುದರಿಂದ ಹಾಗೂ ಪುರುಷರಿಗೆ ಎಲ್ಲ ಕ್ಷೇತ್ರದಲ್ಲಿ ಸಮಾನತೆಯಿಂದ ಕೆಲಸ ನಿರ್ವಹಿಸುತ್ತಿರುವುದರಿಂದ ಭಾರತ ದೇಶ ಸುಭದ್ರವಾಗಿದೆ ಎಂದು ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಎರಗಿ ಉಮೇಶ್‌ರವರು ಹೇಳಿದರು.

ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ ಮಲೆನಾಡು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಯೋಜನೆಯವರ ವತಿಯಿಂದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಮನೆಯಲ್ಲಿ ಮಹಿಳೆಯಿಲ್ಲದಿದ್ದರೇ ಗಂಡಸಿನ ಪಾಡು ಅದೋಗತಿಯಾಗುತ್ತದೆ. ಪುರುಷ ಬೆಳಿಗ್ಗೆ 9ಗಂಟೆಗೆ ಮನೆಯಿಂದ ಹೊರಗೆ ಹೋದರೆ ಆಗ ವಾಪಸ್ಸು ಮನೆ ಸೇರುವುದು ರಾತ್ರಿ ಆದರೆ ಹೆಂಡತಿ, ತಾಯಿ, ತಂಗಿ ಯಾರೇ ಆದರೂ ಮನೆ ಸ್ವಚ್ಚ ಮಾಡುವುದರಿಂದ ಹಿಡಿದು ಕೊಟ್ಟಿಗೆ ಕೆಲಸ ಹೀಗೆ ಪ್ರತಿಯೊಂದು ಕೆಲಸವನ್ನು ಮಹಿಳೆಯರೇ ಮಾಡುವುದು ಅದರ ಜೊತೆಗೆ ಗಂಡನಿಗೆ ಸರಿ ಸಮಾನವಾಗಿ ದುಡಿಮೆಯನ್ನು ಮಾಡುತ್ತಾರೆ ಆದ್ದರಿಂದ ಈ ಪುರುಷ ಸಮಾನವಾಗ ಭಾರತ ದೇಶದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಭೂಮಿ ತಾಯಿಗೆ ಎಷ್ಟು ಪೂಜ್ಯ ಭಾವನೆಯಿಂದ ನೋಡಿಕೊಳ್ಳುತ್ತೇವೋ ಅಷ್ಟೆ ಗೌರವ ಮಹಿಳೆಯರಿಗಿದೆ ಎಂದರು.


ಮಲೆನಾಡು ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜಿಕ ಸಂಸ್ಥೆಯ ಅಧ್ಯಕ್ಷರಾದ ಅರವಿಂದ್ ಸಾಗರ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದುಡಿಯುವ ಮಹಿಳೆಯರಿಗಾಗಿ ಈ ಕಾರ್ಯಗಾರವನ್ನು ಎರ್ಪಡಿಸಲಾಗಿದ್ದು ಪ್ರತಿಯೊಬ್ಬ ಮಹಿಳೆಯರು ಗಂಡಸರಿಗೆ ಸರಿ ಸಮಾನವಾಗಿ ನಿಲ್ಲುವುದರ ಜೊತೆಗೆ ತಾವು ತಮ್ಮ ಮನೆಗಳಲ್ಲಿ ತಾವೇ ಉದ್ಯೋಗ ಸೃಷ್ಠಿ ಮಾಡಿಕೊಳ್ಳಬಹುದು ಇದಕ್ಕಾಗಿ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತದೆ ಈ ಕಾರ್ಯಾಗಾರ ಮಾಡುವು ಉದ್ದೇಶವೇ ದುಡಿಯುವ ಕೈಗಳಿಗೆ ಕೆಲಸ, ಸರ್ಕಾರದ ಸೌಲಭ್ಯದಿಂದ ಯಾರು ವಂಚಿತರಾಗಬಾರದು ಹಾಗೂ ಮಹಿಳಾ ಹಕ್ಕುಗಳು ಯಾವುದು ಅದನ್ನು ಎಷ್ಟು ಸದುಪಯೋಗ ಪಡಿಸಿಕೊಳ್ಳುತ್ತಿದಿರಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಎಲ್ಲ ಮಹಿಳೆಯರು ಉಪಯೋಗಿಸಿಕೊಳ್ಳಬೇಕೆಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಂಜಪ್ಪನವರು ಮಾತನಾಡಿ, ಊಟ ಎಷ್ಟು ಮುಖ್ಯವೋ ಉಳಿತಾಯ ಮಾಡುವುದು ಅಷ್ಟೇ ಮುಖ್ಯ. ಕಷ್ಟಕಾಲದಲ್ಲಿ ಉಳಿತಾಯ ಮಾಡಿದ ಹಣ ಉಪಯೋಗಕ್ಕೆ ಬರುತ್ತಾದೆ ಪ್ರತಿಯೊಬ್ಬರು ಬ್ಯಾಂಕ್ ಖಾತೆ ತೆರೆದು ಇಂದಿನಿಂದಲೇ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ ಉಳಿತಾಯ ಮಾಡಿಕೊಳ್ಳಿರಿ ಇದರಿಂದ ನಿಮ್ಮ ಕುಟುಂಬ ನಿರ್ವಹಣೆಗೆ ಅನುಕೂಲಕರವಾಗುತ್ತದೆ ಎಂದರು.


ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಶಿಕ್ಷಣಾಧಿಕಾರಿ ದೇಶಪಾಂಡೆಯವರು ಮಹಿಳೆಯರಿಗೆ ಸವಿಸ್ತಾರವಾಗಿ ಕಾನೂನಿನ ಅರಿವು ಹಾಗೂ ಉಳಿತಾಯ ಮಾಡುವುದರಿಂದ ಲಾಭದ ಬಗ್ಗೆ ವಿವರಿಸಿದರು.


ಮುಖ್ಯ ಅತಿಥಿಯಾಗಿ ಮಾದವಿ, ಗಂಗಾರತ್ನ ಹಾಗೂ ವಿವಿಧ ಸಂಘಗಳ ಮಹಿಳೆಯರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!