ಕಳುವಾಗಿದ್ದ ಮೊಬೈಲ್ ಫೋನ್‌ಗಳು ವಾರಸುದಾರರಿಗೆ ಹಸ್ತಾಂತರ

0 281

ಚಿಕ್ಕಮಗಳೂರು: ಮೊಬೈಲ್ ಫೋನ್‌ಗಳನ್ನು (Mobile Phone’s) ಕಳೆದುಕೊಂಡಿದ್ದ ವಾರಸುದಾರರಿಗೆ ಸುಮಾರು 6 ಲಕ್ಷ ರೂ. ಬೆಲೆಯ 60 ಮೊಬೈಲ್‌ಗಳನ್ನು ಗುರುವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿತರಿಸಲಾಯಿತು.

ಪೋರ್ಟಲ್ ಬಳಸಿ ಪತ್ತೆ ಮಾಡಲಾದ ಈ ಮೊಬೈಲ್ ಫೋನ್‌ಗಳನ್ನು ಗುರುವಾರ ಪೊಲೀಸ್ ವರಿಷ್ಠಾಧಿಕಾರಿ (Chikkamagaluru SP) ಡಾ|| ವಿಕ್ರಮ್ ಅಮಟೆ ವಿತರಿಸಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 837 ಫೋನ್‌ಗಳು ಕಳವು ಪ್ರಕರಣದಲ್ಲಿ, ಈಗಾಗಲೇ 220 ಫೋನ್‌ಗಳ ಬಗ್ಗೆ ತನಿಖೆ ನಡೆಸಿ ಈವರೆಗೆ 190 ಮೊಬೈಲ್‌ಗಳನ್ನು ಸಂಬಂಧಪಟ್ಟವರಿಗೆ ವಿತರಿಸಲಾಗಿದೆ ಎಂದರು.

ಸಾರ್ವಜನಿಕರು ನಿಮ್ಮ ಮೊಬೈಲ್‌ಗಳನ್ನು ಕಳೆದುಕೊಂಡಲ್ಲಿ ಮೊಬೈಲ್‌ಫೋನ್‌ಗೆ ಸಂಬಂಧಿಸಿದ ದಾಖಲಾತಿಗಳು, ನಿಮ್ಮ ಗುರುತಿನ ಪುರಾವೆ ಹಾಗೂ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರತಿಯೊಂದಿಗೆ ಸಿಇಐಆರ್ ವೆಬ್ ಪೋರ್ಟಲ್ ನಲ್ಲಿ ವರದಿ ದಾಖಲಿಸಲು ಸೂಚಿಸಲಾಗಿದೆ.

ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗವಿರಾಜ್, ಪಿಎಸ್‌ಐ ರಘುನಾಥ್ ಎಸ್.ವಿ, ವಿಶ್ವನಾಥ್ ಎನ್.ಸಿ ಹಾಗೂ ಸಿಬ್ಬಂದಿಗಳಾದ ಅನ್ವರ್ ಪಾ?, ಹರಿಪ್ರಸಾದ್ ತಂಡ ಮೊಬೈಲ್‌ಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಿದ್ದಾರೆ.

2022ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರಾಜ್ಯದಲ್ಲಿ ಸಿಇಐಆರ್ ಪೋರ್ಟಲ್‌ಅನ್ನು ಪ್ರಾರಂಭ ಮಾಡಲಾಗಿದ್ದು ದಿನಾಂಕ 17/05/2022ರಂದು ರಾಜ್ಯ ವ್ಯಾಪಿಯಾಗಿ ಜಾರಿಗೆ ತರಲಾಗಿದ್ದು, ಪ್ರಾಯೋಗಿಕವಾಗಿ ತೆಲಂಗಾಣ ರಾಜ್ಯದಲ್ಲಿ ಸಿಇಐಆರ್ ಪೋರ್ಟಲ್‌ಅನ್ನು ಅಳವಡಿಸಲಾಗಿತ್ತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎ.ಎಸ್‌ಪಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!