ಮೂಲ ಆಹಾರ ಪದ್ದತಿಗೆ ಹೊರಳಿದರೆ ಭವಿಷ್ಯದ ಸಮಾಜ ಸುಸ್ಥಿರವಾಗಿ ಹಾಗೂ ಸದೃಢವಾಗುವುದು ; ಹರೇಕಳ ಹಾಜಬ್ಬ

0 40


ಹೊಸನಗರ: ಸರ್ಕಾರದ ಅಕ್ಕಿ, ಕುರುಕಲು ತಿಂಡಿ, ತಂಪು ಪಾನೀಯಗಳು ನಮ್ಮ ಗಟ್ಟಿ ದೇಹವನ್ನು ದುರ್ಬಲಗೊಳಿಸಿದೆ. ಮನಸ್ಸಿನ್ನು ಚಂಚಲಗೊಳಿಸಿದೆ. ಮತ್ತೆ ಹಲಸನ್ನೆ ಆಹಾರ ಪದ್ದತಿಯಾಗಿ ಮಾಡಿಕೊಳ್ಳುವವರೆಗೂ ನಮ್ಮ ಯುವಕ ಯುವತಿಯರು ದೈಹಿಕವಾಗಿ ಸಬಲರಾಗದು. ಇಂತಹ ಹಲಸಿನ ಹಬ್ಬದ ಮೂಲಕ ನಮ್ಮ ಪೋಷಕ ಬಳಗ ಮೂಲ ಆಹಾರ ಪದ್ದತಿಗೆ ಹೊರಳಿದರೆ ಭವಿಷ್ಯದ ಸಮಾಜ ಸುಸ್ಥಿರ ಸಮಾಜವಾಗಿ ಹಾಗೂ ಸದೃಢವಾಗುವುದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಆಯೋಜಿಸಿದ ಹಲಸಿನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಜೀವನಶೈಲಿ, ಊಟದ ಸಮಯ, ವ್ಯಾಯಾಮಗಳ ಕೊರತೆ ಕಾಲಕಾಲಕ್ಕೆ ಸಿಗುವ ಹಣ್ಣುಗಳನ್ನು ತಿನ್ನದಿರುವುದು, ಕೆಲವು ಹಣ್ಣುಗಳ ಬಗ್ಗೆ ಅಸಡ್ಡೆಯಿರುವುದು ಪೌಷ್ಟಿಕಾಂಶ ಇರುವ ಆಹಾರದ ಬಗ್ಗೆ ತಿಳುವಳಿಕೆ ಕೊರತೆಯಿರುವುದು ಕೂಡ ಮಕ್ಕಳ ಬೌಧಿಕ ಬೆಳವಣಿಗೆಗೆ ದೈಹಿಕ ದೃಢತೆಗೆ ಕಾರಣ ಎಂದು ಅಭಿಪ್ರಾಯಪಟ್ಟರು.


ಈ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಸದಾಶಿವ ಶ್ರೇಷ್ಠಿ, ಶಾಂತಮೂರ್ತಿ ನಾಗೇಶ್, ಗಣಪತಿ ಹೆಗಡೆ, ಮಹೇಂದ್ರ, ಸುದೇಶ್ ಕಾಮತ್, ಶಿವಕುಮಾರ್, ಶಾಂತರಾಜ್, ಉಷಾ, ಶೃತಿ, ಉಪಸ್ಥಿತರಿದ್ದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದೇಶ್ ಕಾಮತ್‌ರವರು ವಹಿಸಿದ್ದರು. 198 ವಿದ್ಯಾರ್ಥಿಗಳು 58 ವಿವಿಧ ವೈವಿದ್ಯಮಯ ತಿನಿಸುಗಳೊಂದಿಗೆ ಮಾರಾಟ ಮಾಡಿ ವ್ಯವಹಾರ ಜ್ಞಾನ ವೃದ್ದಿಸಿಕೊಂಡರು.

Leave A Reply

Your email address will not be published.

error: Content is protected !!