ಸಂವಿಧಾನ ಜಾಗೃತಿ ಜಾಥಾ |  ಪ್ರತಿಯೊಬ್ಬ ನಾಗರೀಕನ್ನು ಸಂವಿಧಾನವನ್ನು ಗೌರವಿಸಬೇಕು

0 211

ರಿಪ್ಪನ್‌ಪೇಟೆ: ಸಂವಿಧಾನ ಜಾಗೃತಿ ಎಂಬುದು ಇಡೀ ರಾಜ್ಯ ದೇಶದ ಪ್ರತಿಯೊಬ್ಬರಿಗೂ ವಿಸ್ತರಿಸಬೇಕಾಗಿದೆ ಎಂದು ತಾಲ್ಲೂಕ್ ಪಂಚಾಯ್ತಿ ಇಓ ನರೇಂದ್ರಕುಮಾರ ಹೇಳಿದರು.

ರಿಪ್ಪನ್‌ಪೇಟೆಗೆ ಸಂವಿಧಾನ ಜಾಗೃತಿ ಜಾಥಾ ರಥವನ್ನು ಗ್ರಾಮ ಪಂಚಾಯ್ತಿಯಿಂದ ಸ್ವಾಗತಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿ, ಭಾರತ ವಿವಿಧ ಧರ್ಮ ಸಂಸ್ಕೃತಿಯನ್ನು ಹೊಂದಿದ ದೇಶವಾಗಿದ್ದು ಈ ದೇಶಕ್ಕೆ ಅನುಗುಣವಾದಂತಹ ಸಂವಿಧಾನವನ್ನು ಪ್ರತಿಯೊಬ್ಬ ನಾಗರೀಕರ ಅರಿಯಬೇಕು. ಸಂವಿಧಾನಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ. ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಬಾಬು ರಾಜೇಂದ್ರಪ್ರಸಾದ್ ಕರಡು ಸಮಿತಿ ಅಧ್ಯಕ್ಷರಾಗಿ ಡಾ.ಬಿ.ಆರ್.ಅಂಬೇಡ್ಕರ್ ನೇಮಕ ಗೊಳ್ಳುತ್ತಾರೆ.1946 ರ ಡಿಸೆಂಬರ್ 9 ರಂದು ಆರಂಭವಾದ ಸಂವಿಧಾನ ರಚನಾ ಪ್ರಕ್ರಿಯೆ ಬಹು ಸಂಸ್ಕೃತಿ ಜಾತಿ ಧರ್ಮ ಪ್ರಾದೇಶಿಕ ಭಿನ್ನತೆ ಇರುವಂತಹ ನಮ್ಮ ದೇಶದಲ್ಲಿ ಸಂವಿಧಾನ ರೂಪುಗೊಳ್ಳಲು 2 ವರ್ಷ 11 ತಿಂಗಳು 18 ದಿನಗಳನ್ನು ತಗೆದುಕೊಂಡಿದೆ. 1949 ಜನವರಿ 26 ರಂದು ಸಂಪೂರ್ಣವಾಗಿ ಸಂವಿಧಾನ ರಚನೆಗೊಂಡು 1950 ಜನವರಿ 26 ರಂದು ಅಂಗೀಕಾರಗೊಳ್ಳುತ್ತದೆ. ಭಾರತೀಯ ಪ್ರಜೆಗಳಾದ ನಾವು ಎಂಬ ಶಬ್ದವು ಸಂವಿಧಾನದ ಮೂಲ ಮಂತ್ರವಾಗಿದ್ದು ಪ್ರತಿ ದಿನವೂ ಪ್ರತಿಯೊಬ್ಬರು ಬಳಸುತ್ತಿದ್ದೇವೆ. ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವ ಎಂಬ ಮೂರು ಆಧಾರ ಸ್ತಂಭಗಳಿಂದ ರಚಿತವಾದ ಸಂವಿಧಾನದಿಂದಲೇ ಉನ್ನತ ಹುದ್ದೇಗೇರಲು ಸಾದ್ಯವಾಗಿದೆ ಪ್ರತಿಯೊಬ್ಬ ನಾಗರೀಕನ್ನು ಸಂವಿಧಾನವನ್ನು ಗೌರವಿಸಬೇಕಿದೆ ಎಂದರು.

ಎಡಿ ರಾಜೇಂದ್ರ ಕುಮಾರ್,ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಮಂಜುಳಾ ಕೇತಾರ್ಜಿರಾವ್, ನಿರೂಫ್‌ಕುಮರ್, ಜಿ.ಡಿ.ಮಲ್ಲಿಕಾರ್ಜುನ, ಗಣಪತಿ, ಡಿ.ಈ.ಮಧುಸೂಧನ್, ಪಿ.ರಮೇಶ್, ಸುಂದರೇಶ್, ಎನ್.ಚಂದ್ರೇಶ್, ಪ್ರಕಾಶ ಪಾಲೇಕರ್, ಸಾರಾಭಿ, ವೇದಾವತಿ, ವನಮಾಲ, ದಾನಮ್ಮ, ಮಹಾಲಕ್ಷ್ಮಿ, ಅಶ್ವಿನಿ, ಅನುಪಮ, ದೀಪಾ ಸುಧೀರ್, ವಿನೋಧ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಧುಸೂದನ್, ಇನ್ನಿತರ ಸಿಬ್ಬಂದಿವರ್ಗ ಹಾಜರಿದ್ದರು.

Leave A Reply

Your email address will not be published.

error: Content is protected !!