ಸರ್ಕಾರಿ ಜಾಗ ಅತಿಕ್ರಮಿಸಿ ರಾತ್ರೋರಾತ್ರಿ ತಲೆ ಎತ್ತಿದ ಶೆಡ್‌ಗಳು ! ಕಿತ್ತು ಬಿಸಾಕಿದ ಗ್ರಾಮಾಡಳಿತ

0 600

ರಿಪ್ಪನ್‌ಪೇಟೆ: ಇಲ್ಲಿನ ಬರುವೆ ಗ್ರಾಮದ ಸರ್ವೇ ನಂ 43 ರಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ಮೀಸಲಿಟ್ಟಿರುವ ಜಾಗವನ್ನು ಕಬಳಿಸುವ ಉದ್ದೇಶದಿಂದ ರಾತ್ರೋರಾತ್ರಿ ಅಕ್ರಮವಾಗಿ ಶೆಡ್‌ಗಳು ಉದ್ಬವವಾಗಿರುವ ಘಟನೆ ನಡೆದಿದ್ದು ವಿಷಯ ತಿಳಿಯುತ್ತದ್ದಂತೆ ಗ್ರಾಮಾಡಳಿತ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಿದೆ.

ಬರುವೆ ಗ್ರಾಮದ ಸರ್ವೇ ನಂ 43ರ ಸಂತೆ ಮೈದಾನದಲ್ಲಿ ಶನಿವಾರ ರಾತ್ರಿ ಏಕಾಏಕಿ ಶೆಡ್ ಹಾಗೂ ಬೇಲಿಯನ್ನು ನಿರ್ಮಿಸಿ ಸರ್ಕಾರಿ ಜಾಗವನ್ನು ಅತಿಕ್ರಮಿಸುವ ಹುನ್ನಾರ ನಡೆದಿತ್ತು ಎನ್ನಲಾಗಿದೆ. ಇಂದು ಮುಂಜಾನೆ ಹಳೇ ಸಂತೆ ಮೈದಾನದ ಮೀನು ಮಾರಾಟದ ಮಳಿಗೆ ಹಿಂಭಾಗದಲ್ಲಿ ಶೆಡ್ ಹಾಗೂ ಬೇಲಿ ಉದ್ಬವವಾಗಿತ್ತು ಇದನ್ನು ಕಂಡ ಸಾರ್ವಜನಿಕರಿಗೆ ಅಶ್ವರ್ಯವಾಗಿತ್ತು.

ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮಿ ಹಾಗೂ ಸದಸ್ಯರು, ಪಿಡಿಒ ಮಧುಸೂದನ್‌ರೊಂದಿಗೆ ಸ್ಥಳಕ್ಕೆ ತೆರಳಿ ರಾತ್ರೋರಾತ್ರಿ ಅಕ್ರಮವಾಗಿ ನಿರ್ಮಿಸಲಾದ ಬೇಲಿ ಹಾಗೂ ಶೆಡ್‌ ಅನ್ನು ತೆರವುಗೊಳಿಸಿದರು.

Leave A Reply

Your email address will not be published.

error: Content is protected !!