ಸಾಂಸ್ಕೃತಿಕ ನಾಯಕ ಬಸವಣ್ಣ, ಸರ್ಕಾರ ಸಚಿವ ಸಂಪುಟ ಕೈಗೊಂಡ ನಿರ್ಧಾರ ಅಭಿನಂದನೀಯ ; ಬಿ.ಜಿ. ಚಂದ್ರಮೌಳಿ

0 220

ರಿಪ್ಪನ್‌ಪೇಟೆ: ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಗುರು ಬಸವಣ್ಣನವರು ಅಸ್ಪೃಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ ದಲಿತ ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ. ಕಲ್ಯಾಣದ ಅನುಭವ ಮಂಟಪದ 770 ಶರಣ ಶರಣೇಯರನ್ನು ಹಾಗೂ ಸಾವಿರಾರು ಜಂಗಮರನ್ನು ಒಗ್ಗೂಡಿಸಿ ಕನ್ನಡದಲ್ಲಿ ವಚನ ಸಂಸ್ಕೃತಿಯನ್ನು ಪಸರಿಸಿ ಸಮಾನತೆಯ ಸಂದೇಶ ಸಾರಿದ್ದು ಬಸವಣ್ಣನವರು. ಅಂತಹ ಜಗಜ್ಯೋತಿ ಬಸವಣ್ಣನವರನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಚಿವ ಸಂಪುಟದಲ್ಲಿ “ಸಾಂಸ್ಕೃತಿಕ ನಾಯಕ’’ ಎಂದು ಹಾಗೂ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಹೆಸರು ಘೋಷಿಸುವ ಮೂಲಕ ಎಲ್ಲ ಸಮುದಾಯದವರು ಒಪ್ಪುವಂತಹ ನಾಯಕ ಎನ್ನುವ ಹೆಗ್ಗಳಿಕೆಗೆ ಸರ್ಕಾರ ಕೈಗೊಂಡ ನಿರ್ಧಾರವನ್ನು ಹೊಸನಗರ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಹಾಗೂ ವೀರಶೈವ ಸಮಾಜದ ಮುಖಂಡ ಬಿ.ಜಿ.ಚಂದ್ರಮೌಳಿ ವರ್ಣಿಸಿ ಈ ಸಂದರ್ಭದಲ್ಲಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಕೈಗೊಂಡಿರುವ ಮಹತ್ವದ ನಿರ್ಧಾರಕ್ಕೆ ಸಮಯೋಚಿತವಾಗಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದ್ದಾರೆ.

Leave A Reply

Your email address will not be published.

error: Content is protected !!