ಹೃದಯಾಘಾತದಿಂದ ವಿಧಿವಶರಾದ ಕೋಡೂರು ಗ್ರಾ‌‌.ಪಂ‌. ಮಾಜಿ ಅಧ್ಯಕ್ಷ ಜಯಂತ್ ಅಂತ್ಯಕ್ರಿಯೆ, ಗಣ್ಯರಿಂದ ಅಂತಿಮ ನಮನ

0 1,141

ರಿಪ್ಪನ್‌ಪೇಟೆ : ಹೃದಯಾಘಾತದಿಂದ ನಿಧನರಾದ ಕೋಡೂರು ಗ್ರಾ.ಪಂ‌‌. ಮಾಜಿ ಅಧ್ಯಕ್ಷ ಕರಿಗೆರಸು ನಿವಾಸಿ ಜಯಂತ್ ಕೆ.ವೈ. (50) ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2:30ಕ್ಕೆ ಅವರ ಜಮೀನಿನಲ್ಲಿ ನೆರವೇರಿತು‌.

ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕರಿಗೆರಸುವಿನ ಅವರ ಸ್ವಗೃಹದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವ್ಯವಸ್ಥೆ ಮಾಡಲಾಗಿತ್ತು.

ಗಣ್ಯರಿಂದ ಅಂತಿಮ ನಮನ
ಜಯಂತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಕೋಡೂರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಮತ್ತಿತರ ಸಾವಿರಾರು ಜನರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಶ್ರದ್ಧಾಂಜಲಿ ಸಭೆ :
ಅಗಲಿದ ಗ್ರಾಪಂ ಮಾಜಿ ಅಧ್ಯಕ್ಷ ಜಯಂತ್ ರವರಿಗೆ ಕೋಡೂರು ಗ್ರಾ.ಪಂ.ನಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಜಯಂತ್ 2005ರಿಂದ ಕರಿಗೆರಸು ಕ್ಷೇತ್ರದಿಂದ ಸತತ ಮೂರು ಬಾರಿ ಕೋಡೂರು ಗ್ರಾ.ಪಂ.ಗೆ ಆಯ್ಕೆಯಾಗಿದ್ದರು. 2015 ರಲ್ಲಿ 5 ವರ್ಷಗಳ ಅವಧಿಗೆ ಕೋಡೂರು ಗ್ರಾ.ಪಂ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿದ್ದ ಇವರು ಅಪಾರ ಸಂಖ್ಯೆಯ ಸ್ನೇಹ ವಲಯವನ್ನು ಹೊಂದಿದ್ದರು.

Leave A Reply

Your email address will not be published.

error: Content is protected !!