ಹೊಸನಗರ ಕೋಟೆಗಾರ್ ವಿದ್ಯಾವರ್ಧಕ ಸಂಘ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ; ಅಧ್ಯಕ್ಷ ಶಶಿಧರ್ ನಾಯ್ಕ್

0 139


ಹೊಸನಗರ: ಪಟ್ಚಣದ ಕೋಟೆಗಾರ್ ವಿದ್ಯಾವರ್ಧಕ ಸಂಘ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಹೊಸನಗರ ತಾಲ್ಲೂಕು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶಶಿಧರ್‌ನಾಯ್ಕ್ ಹೇಳಿದರು.

ಪಟ್ಟಣದ ಸೀತಾರಾಮಚಂದ್ರ ಸಭಾಭವನದಲ್ಲಿ ಕೋಟೆಗಾರ್ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆ ನಡೆಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಹೊಸನಗರ ಕೋಟೆಗಾರ್ ವಿದ್ಯಾವರ್ಧಕ ಸಂಘವೂ ಪ್ರತಿಯೊಂದು ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಿಕೊಂಡು ಬರುವುದರ ಜೊತೆಗೆ ಮನವಿ ಬಂದ ದೇವಸ್ಥಾನಗಳಿಗೆ ನಮ್ಮ ಸಂಘದ ವತಿಯಿಂದ ದೇಣಿಗೆ ನೀಡುತ್ತಿದ್ದೇವೆ ಪ್ರತಿ ವರ್ಷ ಸಂಘದ ಆವರಣದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದೇವೆ ಸಾರ್ವಜನಿಕರಿಂದ ಯಾವುದೇ ದೇಣಿಗೆ ಪಡೆಯದೇ ಎಲ್ಲ ಖರ್ಚುಗಳನ್ನು ಸಂಘವೇ ನಿರ್ವಹಿಸುತ್ತದೆ ಗಣಪತಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ವಿವಿಧ ಬಗೆಯ ಸಾಂಸ್ಕೃತೀಕ ಕಾರ್ಯಕ್ರಮಗಳು ಮನರಂಜನೆಗಳನ್ನು ಏರ್ಪಡಿಸಿ ಗಣಪತಿ ಮೂರ್ತಿಯನ್ನು ವಿಸರ್ಜಿಸುತ್ತಿದೇವೆ.
ಸಂಘದ ವತಿಯಿಂದ ಕುಲಜಾತಿ ಬಂಧವರಿಗೆ ಶವ ಸಂಸ್ಕಾರ ಬಾಬ್ತು ಹಣವನ್ನು ಮೃತಪಟ್ಟ ಮನೆಯವರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಡಿಗ್ರಿಗಳಲ್ಲಿ ಹೆಚ್ಚು ಅಂಕ ಪಡೆದ ಕುಲಜಾತಿಯ ಮಕ್ಕಳಿಗೆ ವಿದ್ಯನಿಧಿ ಯೋಜನೆಯಲ್ಲಿ ಸನ್ಮಾನ ಹಾಗೂ ಸಹಾಯ ಹಸ್ತ ನೀಡುತ್ತಾ ಬಂದಿದ್ದೇವೆ. ಆರೋಗ್ಯ ನಿಧಿಯಲ್ಲಿ ಆನಾರೋಗ್ಯ ಪೀಡಿತರಿಗೆ ಸಂಘದ ವತಿಯಿಂದ 25 ಸಾವಿರ ಧನ ಸಹಾಯ ನೀಡುತ್ತಾ ಬರುತ್ತಿದ್ದೇವೆ ಸಂಘದ ಆವರಣದಲ್ಲಿ ದೇವಿಯ ಅಥವಾ ಸೀತಾ ಮತ್ತು ಶ್ರೀ ರಾಮಚಂದ್ರ ದೇವಸ್ಥಾನ ನಿರ್ಮಿಸುವ ಗುರಿ ಹೊಂದಿದ್ದು ಮುಂದಿನ ದಿನದಲ್ಲಿ ದೇವಸ್ತಾನದ ಕನಸು ನನಸು ಮಾಡುತ್ತೇವೆ ನಮ್ಮ ಕೋಟೆಗಾರ್ ವಿದ್ಯಾವರ್ಧಕ ಸಂಘವೂ 3ನೇ ಸ್ಥಾನದಲ್ಲಿದ್ದು ಪ್ರಥಮ ಸ್ಥಾನ ಕುಂದಾಪುರ, ಎರಡನೇ ಸ್ಥಾನ ಬೈಂದೂರು ಆಗಿದ್ದು ಮುಂದಿನ ದಿನದಲ್ಲಿ ಹೊಸನಗರ ಕೋಟೆಗಾರ್ ವಿಧ್ಯಾವರ್ಧಕ ಸಂಘವನ್ನು ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಗುರಿಯನ್ನು ಹೊಂದಿದ್ದು ಕುಲ ಬಾಂಧವರು ಸಂಘದ ಸದಸ್ಯರಾಗುವ ಜೊತೆಗೆ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘದ ಏಳಿಗೆಗಾಗಿ ದುಡಿಯಬೇಕೆಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಗಳಾದ ಹೆಚ್.ಆರ್.ಸುರೇಶ್, ಶ್ರೀನಿಧಿ ಗೋಪಾಲ್, ಡಾ|| ದಿನಮಣಿ, ಗೋವಿಂದರಾಯ, ಗುತ್ತಿಗೆದಾರ ಮಹಾಬಲ ಹೆಚ್, ಶಾರದ, ವಿಠೋಬಾ ನಾಯ್ಕ, ಕೋಡಿ ಚಂದ್ರಶೇಖರ್, ಕೆ.ಜಿ.ನಾಗೇಶ್, ಮನೋಹರ, ಪ್ರವೀಣ್,ಪಿ.ಆರ್ ಸಂಜೀವ, ಅರುಣ, ಬೇಕರಿ ಸುಬ್ರಹ್ಮಣ್ಯ, ತಿಮ್ಮಪ್ಪ, ಗೋವಿಂದಪ್ಪ, ಸಂಘದ ಸದಸ್ಯರಾದ ಹೆಚ್.ಎಸ್. ಮಂಜುನಾಥ್, ಹೆಚ್. ಆರ್.ರಾಘವೇಂದ್ರ, ಹೆಚ್.ಎಸ್. ಬಾಬುರಾವ್, ಹೆಚ್.ಎಸ್. ಹರೀಶ, ಹೆಚ್.ಎಸ್. ದಿನೇಶ, ಗೋಪಿ, ಸುನೀಲ್ ಹಿರಿಯಣ್ಣ, ಹೆಚ್. ಶ್ರೀನಿವಾಸ್, ಮಂಜುನಾಥ್, ಮಹಿಳೆಯರಾದ ಸುವರ್ಣ, ಜಯಲಕ್ಷ್ಮಿ, ಜಯಶ್ರೀ, ಅಪರ್ಣ, ಅಂಬಿಕಾ, ಸಬಿತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!