ಹೊಸನಗರ: ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾರಿಗುಡ್ಡದ ಹೆಲಿಪ್ಯಾಡ್ ಬಳಿ ಇಬ್ಬರು ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದು ಈ ಆರೋಪಿಗಳನ್ನು ಹೊಸನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಗಳನ್ನು ಬಟ್ಟೆಮಲ್ಲಪ್ಪದ ಫಯಾಜ್ ಬಿನ್ ಕರೀಂ ಸಾಬ್ ಹಾಗೂ ಮೊಹಮ್ಮದ್ ತಾಯಿಜ್ ಬಿನ್ ಮೊಹಮ್ಮದ್ ಎಂದು ಗುರುತಿಸಲಾಗಿದ್ದು ಇವರ ವಿರುದ್ದ ಹೊಸನಗರದಲ್ಲಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ನೀರರಾಜ್ ನರಲಾರರವರ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿಗಳು ಕೇಸ್ ದಾಖಲಿಸಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.