ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಮದುವೆಯಾದ ಯುವಕ‌ ; ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಸೋ ಕೇಸ್ !

0 45

ರಿಪ್ಪನ್‌ಪೇಟೆ : ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ನಂತರ ಲೈಂಗಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿ ಮದುವೆಯಾದ ಯುವಕನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ.

ನೊಂದ ಬಾಲಕಿ ನೀಡಿದ ದೂರಿನಲ್ಲೇನಿದೆ ?

ಈಗ್ಗೆ 4 ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡಿರುತ್ತಾರೆ. ನಾನು ತಂದೆ ಮತು ಅಣ್ಣನೊಂದಿಗೆ ವಾಸ ಮಾಡುತ್ತಿದ್ದು ನಾನು 08 ಮತ್ತು 09ನೇ ತರಗತಿಯನ್ನು ಸರ್ಕಾರಿ ಪ್ರೌಢಶಾಲೆ ಚಿಕ್ಕಜೇನಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು ತಾಯಿ ತೀರಿಕೊಂಡ ನಂತರ ಶಾಲೆಯನ್ನು ಅರ್ಧಕ್ಕೆ ಬಿಟ್ಟಿರುತ್ತೇನೆ. ನನ್ನ ಊರಿನ ಯುವಕ (******) ಸುಮಾರು ಮೂರ್ನಾಲ್ಕು ವರ್ಷಗಳಿಂದ ನನಗೆ ಪರಿಚಯವಿದ್ದು ಪರಸ್ಪರ ಪ್ರೀತಿಸುತ್ತಿದ್ದು, ಈ ವಿಚಾರ ನನ್ನ ಮನೆಯಲ್ಲಿ ಗೊತ್ತಿರುವುದಿಲ್ಲ.

2022 ರ ಆಗಸ್ಟ್ 22 ನೇ ತಾರೀಖಿನಂದು ಬೆಳಿಗ್ಗೆ ನನ್ನ ಮನೆಯ ಹತ್ತಿರವಿರುವ ಅಂಗನವಾಡಿ ಹಿಂಭಾಗದ ಕಾಡಿನಲ್ಲಿ ಆತ ಮೊದಲ ಬಾರಿಗೆ ಲೈಂಗಿಕ ಸಂಪರ್ಕ ಬೆಳೆಸಲು ಬಂದಾಗ ಆಗ ನನಗೆ ಇನ್ನು 18 ವರ್ಷ ಆಗಿರದೇ ಇದ್ದು, ನಾನು ಇನ್ನೂ ಚಿಕ್ಕವಳು ಲೈಂಗಿಕ ಸಂಪರ್ಕ ಮಾಡುವುದು ಬೇಡವೆಂದರೂ ನಾನು ನಿನ್ನನ್ನು ಮದುವೆಯಾಗುತ್ತೇನೆಂದು ಏನು ಆಗುವುದಿಲ್ಲವೆಂದು ಬಲವಂತಪಡಿಸಿ ನನ್ನನ್ನು ಒಪ್ಪಿಸಿ ಲೈಂಗಿಕ ಸಂಪರ್ಕ ಮಾಡಿದ್ದು ನಂತರ ಹಲವು ಬಾರಿ ಭೇಟಿಯಾದಾಗ ಅದೇ ಜಾಗದಲ್ಲಿ ಲೈಂಗಿಕ ಸಂಪರ್ಕ ಹೊಂದಿರುತ್ತಾರೆ.

ನಾನು 4-5 ತಿಂಗಳು ಮುಟ್ಟಾಗದೇ ಇದ್ದು, ಅಕ್ಕ- ಪಕ್ಕದ ಮನೆಯವರು ‘ಹೊಟ್ಟೆ ಯಾಕೆ ದಪ್ಪವಾಗಿದೆ ? ಏನಾಗಿದೆ ? ‘ ಎಂದು ಕೇಳಿದ್ದಕ್ಕೆ ‘ನನಗೆ ಹೊಟ್ಟೆ ಇರುವುದೇ ಹಾಗೆ’ ಎಂದು ಹೇಳಿದ್ದು ನಂತರ ನನ್ನನ್ನು ಅನುಮಾನ ಬಂದು ನಾನು ಆತನ ಕಡೆಯಿಂದ ಪ್ರಗ್ನೆಸ್ನಿ ಟೆಸ್ಟ್ ಕಿಟ್ ತರಿಸಿಕೊಂಡು ಅಂಗನವಾಡಿ ಹಿಂದಿನ ಕೇಂದ್ರದಲ್ಲಿ ಚೆಕ್ ಮಾಡಿದಾಗ ಅದರಲ್ಲಿ ಪಾಸಿಟಿವ್ ಬಂದಿದ್ದರಿಂದ ಗರ್ಭಿಣಿಯಾಗಿರುವುದು ಖಾತ್ರಿಯಾಗಿದ್ದರಿಂದ ಪ್ರಿಯತಮನ ಬಳಿ ಹೇಳಿರುತ್ತೇನೆ.

ನಂತರ ಪರಸ್ಪರ ಇಬ್ಬರೂ ಪ್ರೀತಿಸುತ್ತಿದ್ದರಿಂದ ಮದುವೆಯಾಗಲು ನಿರ್ಧರಿಸಿ ದಿನಾಂಕ: 14‌.03.2023 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ನಾನು ಮತ್ತು ಪ್ರಿಯತಮನ ಬೈಕ್ ನಲ್ಲಿ ನನ್ನ ಬಟ್ಟೆ, ಆಧಾರ್ ಕಾರ್ಡ್ ಮತ್ತು ಶಾಲಾ ದಾಖಲಾತಿಗಳನ್ನು ತೆಗೆದುಕೊಂಡು ಪ್ರಿಯತಮನ ಸ್ನೇಹಿತನ ಮನೆಗೆ ಹೋಗಿ ರಾತ್ರಿ ಅಲ್ಲೆ ವಾಸವಿದ್ದು, ದಿನಾಂಕ: 15/03/2023 ರಂದು ಸಂಜೆ 4-00 ಗಂಟೆ ಸುಮಾರಿಗೆ ಪ್ರಿಯತಮನ ಮನೆದೇವರ ಗುಡಿಯ ಮುಂದೆ ಮದುವೆಯಾಗಿರುತ್ತೇವೆ.

ದೇವಸ್ಥಾನದ ಬಾಗಿಲು ಮುಚ್ಚಿದ್ದು ಈ ಸಮಯದಲ್ಲಿ ಯಾರೂ ಇರುವುದಿಲ್ಲ. ಫೋಟೋ ತೆಗೆದಿರುವುದಿಲ್ಲ. ಪ್ರಿಯತಮನ ಸ್ನೇಹಿತನಿಗೂ ಮದುವೆ ವಿಚಾರ ಗೊತ್ತಿದ್ದರೂ ಆತ ಬಂದಿರುವುದಿಲ್ಲ. ನಂತರ ಪ್ರಿಯತಮನ ಸ್ನೇಹಿತನ ಮನೆಗೆ ಮತ್ತೆ ಹೋದೆವು, ಆ ದಿವಸ ಅಲ್ಲಿಯೇ ಉಳಿದುಕೊಂಡು ಮಾರನೆ ದಿನ ದಿನಾಂಕ: 16/03/2023 ರಂದು ಮಧ್ಯಾಹ್ನದ ಸುಮಾರಿಗೆ ನನ್ನ ಪ್ರಿಯತಮ ಸ್ವಿಚ್ ಆಫ್ ಮಾಡಿದ ತನ್ನ ಫೋನನ್ನು ಸ್ವಿಚ್ ಆನ್ ಮಾಡಿದಾಗ ಅವನಿಗೆ ಯಾರೋ ಫೋನ್ ಮಾಡಿ ನಮ್ಮ ಊರಿನ ಅಂಗನವಾಡಿ ಕೇಂದ್ರಕ್ಕೆ ಬರುವಂತೆ ತಿಳಿಸಿದ್ದರಿಂದ ನಾನು ಮತ್ತು ಪ್ರಿಯತಮ ಅವನ ಬೈಕಿನಲ್ಲಿ ನೇರವಾಗಿ ಅಂಗನವಾಡಿ ಕೇಂದ್ರಕ್ಕೆ ಬಂದಿರುತ್ತೇವೆ. ನಂತರ ಅಲ್ಲಿ ಯಾರೋ
ಆಶಾ ಕಾರ್ಯಕರ್ತೆ ಮತ್ತು ಇನ್ನೊಬ್ಬರು ಇದ್ದು, ಅವರು ಯಾರೆಂಬುದು ತಿಳಿದಿರುವುದಿಲ್ಲ ಅವರು ನನ್ನನ್ನು ವಿಚಾರಣೆ ಮಾಡಿ ಕರೆದುಕೊಂಡು ಬಂದು ಸಂಜೆ 6-00 ಗಂಟೆ ಸುಮಾರಿಗೆ ಸುರಭಿ ಕೇಂದ್ರ ಶಿವಮೊಗ್ಗಕ್ಕೆ ಬಿಟ್ಟಿರುತ್ತಾರೆ.

ನಾನು ಅಪ್ರಾಪ್ತೆಯೆಂದು ತಿಳಿದರೂ ಸಹ ಪ್ರಿಯತಮ
ನನ್ನನ್ನು ಪುಸಲಾಯಿಸಿ ಅವರೊಂದಿಗೆ ದೈಹಿಕ ಸಂಪರ್ಕ ಮಾಡಿದ್ದರಿಂದ ಆತನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಆಪ್ತ ಸಮಾಲೋಚಕಿ ನಾಗರತ್ನ ಎಸ್ ಎಸ್ ರವರ ಮುಂದೆ ನೊಂದ ಬಾಲಕಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಕಲಂ 376(2)(ಎನ್) (ಎಫ್) ಐಪಿಸಿ, ಕಲಂ 6, ಪೋಕ್ಸೊ ಕಾಯ್ದೆ 2012 ಹಾಗೂ ಕಲಂ 09, ಚೈಲ್ಡ್ ಮ್ಯಾರೇಜ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!