ಉಚಿತ ಕೃತಕ ಕಾಲು ಜೋಡಣಾ ಶಿಬಿರ ; ಪರೋಪಕಾರವೇ ಜೈನ ಧರ್ಮದ ಮೂಲಮಂತ್ರ


ರಿಪ್ಪನ್‌ಪೇಟೆ: ಕೈ, ಕಾಲುಗಳಲ್ಲಿ ಎಂಬ ಸಂಕುಚಿತ ಭಾವನೆಯಿಂದ ತಮ್ಮ ಬದುಕು ಹಾಳು ಮಾಡಿಕೊಳ್ಳದೇ ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ಬೆಳಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂದು ಹುಂಚ ಜೈನಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಕರೆ ನೀಡಿದರು.

ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಹೊಂಬುಜ ಜೈನ ಮಠ ಮತ್ತು ಶ್ರೀ ಪದ್ಮಾವತಿ ಎಜುಕೇಷನಲ್ ಟ್ರಸ್ಟ್, ಆಲ್ ಇಂಡಿಯಾ ಜೈನ ಯುಥ್ ಫೆಡರೇಷನ್ ಹಾಗೂ ಹುಬ್ಬಳ್ಳಿ ಮಹಾವೀರ್ ಲಿಂಬ್ ಸೆಂಟರ್ ಹುಬ್ಬಳ್ಳಿ ದಿಗಂಬರ್ ಜೈನ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜನಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಿಕಲಚೇತನರಿಗೆ ಉಚಿತ ಕೃತಕ ಕಾಲು ಜೋಡಣಾ ಶಿಬಿರದ ಉದ್ಘಾಟನೆ ನೆರವೇರಿಸಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೈನ ಅನಾದಿಕಾಲದಿಂದಲೂ ಪರೋಪಕಾರವೇ ಜೈನ ಧರ್ಮದ ಮೂಲ ಮಂತ್ರವಾಗಿದ್ದು ಅದರನ್ವಯ ಸಕಲ ಜೀವಾತ್ಮಗಳಲ್ಲಿಯೂ ಪರಸ್ಪರ ಉಪಕಾರ ಭಾವನೆ ಇರುತ್ತದೆ. ತಾನು ಬದುಕಿ ಇನ್ನೊಬ್ಬರನ್ನು ಬದುಕಿಸುವ ಮನೋಭಾವವೇ ಪರೋಪಕಾರವೆಂದು ಹೇಳಿದ ಶ್ರೀಗಳು, ಜೈನ ಧರ್ಮ, ಮಾನವಧರ್ಮ, ಮನುಷ್ಯ ಧರ್ಮದಲ್ಲಿ ಸಹಕಾರ ಮನೋಭಾವನೆ ಅಗತ್ಯವಾಗಿದೆ ಎಂದ ಅವರು ಮೂರ್ನಾಲ್ಕು ವರ್ಷ ಕೃತಕ ಕೈ, ಕಾಲು ಜೋಡಣೆಯ ನಿರ್ವಹಣಾ ವೆಚ್ಚವನ್ನು ಮಠದ ವತಿಯಿಂದ ಭರಿಸುವುದಾಗಿ ಶ್ರೀಗಳು ಪ್ರಕಟಿಸಿದರು.

ಹುಬ್ಬಳ್ಳಿ ಮಹಾವೀರ್ ಲಿಂಬ್ ಸೆಂಟರ್ ಮಹೇಂದ್ರ ಸಿಂಘೆ ಮಾತನಾಡಿ, ಮೊದಲು ಜೈಪುರಕ್ಕೆ ಹೋಗಿ ಈ ಸೌಲಭ್ಯವನ್ನು ಪಡೆಯಬೇಕಾಗಿತ್ತು ಇದರಿಂದಾಗಿ ಬಡಕೂಲಿ ಕಾರ್ಮಿಕರು ತಮ್ಮ ಭವಿಷ್ಯವೇ ಇಲ್ಲಿಗೆ ಮುಗಿಯಿತು ಎಂಬ ಭಾವನೆಯಲ್ಲಿ ಧೈರ್ಯ ಕಳೆದುಕೊಂಡಿದ್ದರು ಅದರೆ ನಮ್ಮ ಸಂಸ್ಥೆ ಕಳೆದ 25 ವರ್ಷಗಳಿಂದ 45 ಸಾವಿರ ನಮ್ಮ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಉಚಿತವಾಗಿ ಇಂತಹ ಜನಕಲ್ಯಾಣ ಸೇವಾ ಕಾರ್ಯವನ್ನು ಮಾಡಲಾಗುತ್ತಿದ್ದು ಇದಕ್ಕೆ ಹೊಂಬುಜ ಶ್ರೀಗಳು ಮೌನಕ್ರಾಂತಿಯ ಮೂಲಕ ಮಾನವೀಯ ಸೇವೆಯನ್ನು ಶ್ರೀಗಳು ಮಾಡುತ್ತಿದ್ದಾರೆಂದರು.

ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಡಾ.ಜೀವನಧರ ಜೈನ, ಗೌತಮ್ ಗೆಲ್ಹೋಟ್, ಪ್ರಕಾಶಕಠಾರಿ ಇನ್ನಿತರರು ಉಪಸ್ಥಿತರಿದ್ದರು.
ರತ್ನಕುಮಾರ್ ಸ್ವಾಗತಿಸಿದರು. ಶ್ರೀಕಾಂತ ನಿರೂಪಿಸಿದರು. ನಿವೃತ್ತ ಶಿಕ್ಷಕ ಮಂಜಪ್ಪ ವಂದಿಸಿದರು.
ಈ ಶಿಬಿರದಲ್ಲಿ 72 ಜನ ಫಲಾನುಭವಿಗಳಿಗೆ ಕೃತಕ ಕೈ ಕಾಲು ಜೋಡಿಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!