ರಾಮಕೃಷ್ಣ ವಿದ್ಯಾಲಯಕ್ಕೆ SSLC ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ


ರಿಪ್ಪನ್‌ಪೇಟೆ: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆಯ ರಾಮಕೃಷ್ಣ ವಿದ್ಯಾಲಯ ಶೇ.100 ರಷ್ಟು ರಿಸಲ್ಟ್ ಪಡೆದಿದೆ ಎಂದು ಸಂಸ್ಥೆಯ ಪ್ರಾಚಾರ್ಯ ರವಿಕುಮಾರ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಸತತವಾಗಿ 7ನೇ ಬಾರಿಗೆ 100% ಫಲಿತಾಂಶ ಪಡೆದಿರುವ ರಾಮಕೃಷ್ಣ ವಿದ್ಯಾಲಯದಲ್ಲಿ ಈ ವರ್ಷವು 32 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು ಆತ್ಯುನ್ನತ ಶ್ರೇಣಿಯಲ್ಲಿ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಾರಾಗಿರುವುದು ಸಂಸ್ಥೆಯ ಹೆಮ್ಮೆಯೆಂದರು.

ಇಂಪನ ಬಿ.ಟಿ.625ಕ್ಕೆ 611 (98%) ಕುಮಾರಿ ದಾತ್ರಿ 607 (97.12%) ಕುಮಾರಿ ಇಂಚರಾ ಬಿ.ಟಿ.599 ಅಂಕಗಳಿಸುವುದರೊಂದಿಗೆ ರಾಮಕೃಷ್ಣ ಶಾಲೆಗೆ 100% ಅಂಕ ಫಲಿತಾಂಶ ತರುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕ ವೃಂದ ಪೋಷಕ ವರ್ಗ ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಶ್ರೀಗುರುಬಸವೇಶ್ವರ ಪ್ರೌಢಶಾಲೆ 82% ಫಲಿತಾಂಶ

SSLC ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆಯ ಶ್ರೀಗುರುಬಸವೇಶ್ವರ ಪ್ರೌಢಶಾಲೆ ಶೇ. 82% ರಷ್ಟು ಫಲಿತಾಂಶ ಪಡೆದಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದರು.

32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 26 ಡಿಸ್ಟಿಂಕ್ಷನ್ 3 ಪ್ರಥಮ ಸ್ಥಾನದಲ್ಲಿ 18 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣಾರಾಗಿದ್ದು ರಕ್ಷಾ ಹೆಚ್ ಎಂಬ ವಿದ್ಯಾರ್ಥಿನಿ 599 ಅಂಕಗಳಿಸುವುದರೊಂದಿಗೆ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದು ಈ ಸಾಧನೆಗೆ ಅಧ್ಯಾಪಕ ವೃಂದ ಹಾಗೂ ಆಡಳಿತ ಮಂಡಳಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಚಿಕ್ಕಜೇನಿ ಪ್ರೌಢ ಶಾಲೆಗೆ ಶೇ.97 ಫಲಿತಾಂಶ

ಚಿಕ್ಕಜೇನಿಯ ಸರ್ಕಾರಿ ಪ್ರೌಢ ಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.97 ಫಲಿತಾಂಶ ದೊರೆತಿದೆ.
ಈ ಶಾಲೆಯ ಒಟ್ಟು 39 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 16 ಡಿಸ್ಟಿಂಕ್ಷನ್, 14 ಫಸ್ಟ್ ಕ್ಲಾಸ್, 7 ಸೆಕೆಂಡ್ ಕ್ಲಾಸ್ ಮತ್ತು ಒಂದು ಪಾಸ್ ಕ್ಲಾಸ್ ಫಲಿತಾಂಶ ಪಡೆದಿದ್ದಾರೆ. ಉತ್ತಮ ಫಲಿತಾಂಶದ ಬಗ್ಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ ಮತ್ತು ಸದಸ್ಯರು ಮತ್ತು ಶಾಲಾ ಮುಖ್ಯ ಶಿಕ್ಷಕ ಶಿವಾಜಿ ಟಿ.ಎಂ. ಅಭಿನಂದಿಸಿರುತ್ತಾರೆ.

ಮೇರಿಮಾತಾ ಪ್ರೌಢ ಶಾಲೆಗೆ ಶೇ.90 ಫಲಿತಾಂಶ:
ಇಲ್ಲಿನ ಮೇರಿಮಾರಾ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90 ರಷ್ಟು ಫಲಿತಾಂಶ ಬಂದಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!