ರಿಪ್ಪನ್‌ಪೇಟೆ: ಮಹಾಶಿವರಾತ್ರಿಯ ಅಂಗವಾಗಿ ರಿಪ್ಪನ್‌ಪೇಟೆ ಸುತ್ತಮುತ್ತ ಗ್ರಾಮಗಳಾದ ಸಿದ್ದಪ್ಪನಗುಡಿ, ಹಾಲುಗುಡ್ಡೆ ಶ್ರೀ ಹಾಲೇಶ್ವರ ದೇವಸ್ಥಾನ, ಬರುವೆ ಈಶ್ವರ ದೇವಸ್ಥಾನ, ಮುಡುಬ ಈಶ್ವರ ದೇವಸ್ಥಾನ, ಗವಟೂರು ರಾಮೇಶ್ವರ ದೇವಸ್ಥಾನ, ಕೋಡೂರು ಶಂಕರೇಶ್ವರ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ವಿಶೇಷ ಪೂಜಾ ಕಾರ್ಯಕ್ರಮವು ಜರುಗಿದವು.
ಮುಂಜಾನೆಯಿಂದಲೇ ಭಕ್ತರು ಗ್ರಾಮದಲ್ಲಿನ ದೇವಸ್ಥಾನಗಳಿಗೆ ತರಳಿ ಪೂಜಾ ಸೇವೆಯನ್ನು ನೆರವೇರಿಸಿದರು.
ಹಾಲುಗುಡ್ಡೆ ಮತ್ತು ನೆವಟೂರು ಹಾಲೇಶ್ವರ ಈಶ್ವರ ದೇವಸ್ಥಾನದಲ್ಲಿ ಮಳಲಿಮಠದ ಡಾ.ಗುರುನಾಗಭುಷಣ ಶಿವಾಚಾರ್ಯ ಮಹಾಸ್ವಾಮೀಜಿಯವರಿಂದ ರುದ್ರಾಭಿಷೇಕ ವಿಶೆಷ ಪೂಜೆ ಮತ್ತು ಧರ್ಮ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಮಿತಿಯವರು ತಿಳಿಸಿದರು.