ಹೊಂಬುಜ ; ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ
ರಿಪ್ಪನ್‌ಪೇಟೆ: ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ತ್ರಿಕೂಟ ಜಿನಾಲಯದ ಶ್ರೀ ಪಾರ್ಶ್ವನಾಥ ಸ್ವಾಮಿ ಏಕಶಿಲಾ ಜಿನಬಿಂಬಕ್ಕೆ 108 ಕಲಶಗಳಿಂದ ಅಭಿಷೇಕ ನೆರವೇರಿಸಲಾಯಿತು.
ಜಲ, ಇಕ್ಷರಸ, ಏಳನೀರು, ಹಾಲು, ಕಲ್ಕಚೂರ್ಣ, ನವಧಾನ್ಯ, ಅರಿಶಿನ, ಗಂಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ತ್ರಿಕೂಟ ಜಿನಾಲಯದ ಶ್ರೀ ಶಾಂತಿನಾಥ ಸ್ವಾಮಿ, ಶ್ರೀ ಬಾಹುಬಲಿ ಸ್ವಾಮಿ ಅಭಿಷೇಕವು ಜರುಗಿತು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಅಭಿಷೇಕವನ್ನು ಜಿನಬಿಂಬಗಳಿಗೆ ಧಾರೆಯೆರೆದು ಪುಳಕಿತರಾದರು.

ಹೊಂಬುಜ ಶ್ರೀ ಪೀಠಾಧೀಶರಾದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಭಕ್ತವೃಂದದವರನ್ನು ಹರಸಿ, ಆಶೀರ್ವದಿಸಿದರು.