ಕೋಡೂರು ; ಅಬ್ಬಿ ಜಲಪಾತ ಪ್ರವೇಶ ನಿರ್ಬಂಧ !

0 70

ರಿಪ್ಪನ್‌ಪೇಟೆ : ಪ್ರಕೃತಿಯ ಸೌಂದರ್ಯವನ್ನೇ ಒಡಲಲ್ಲಿ ಇಟ್ಟುಕೊಂಡಿರುವ ತಾಲೂಕು ಹೊಸನಗರ. ಆದರೆ ಇಲ್ಲಿನ ಕೆಲ ತಾಣಗಳು ಅಪಾಯಕಾರಿಯಾಗಿದ್ದು ಪ್ರಕೃತಿ ಸೌಂದರ್ಯ ಸವಿಯಲು ಬಂದ ಅದೆಷ್ಟೋ ಪ್ರವಾಸಿಗರು ಪ್ರಾಣತೆತ್ತ ಉದಾಹರಣೆಗಳಿವೆ‌‌.

ಈ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಕೋಡೂರು ಗ್ರಾ.ಪಂ ವ್ಯಾಪ್ತಿಯ ಕುಸುಗುಂಡಿ ಗ್ರಾಮದಲ್ಲಿರುವ ಅಬ್ಬಿ ಜಲಪಾತಕ್ಕೆ ಪ್ರವಾಸಿಗರು ಪ್ರವೇಶಿಸದಂತೆ ಗ್ರಾಮಾಡಳಿತ ನಿರ್ಬಂಧ ವಿಧಿಸಿದೆ.

ಕಳೆದ ಎರಡು ವರ್ಷದ ಹಿಂದೆ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ಇದೆ ಜಲಪಾತದಲ್ಲಿ ನೀರುಪಾಲಾಗಿದ್ದ. ಇದು ಅಪಾಯಕಾರಿ ಜಲಪಾತವಾಗಿದ್ದು ಪ್ರವಾಸಿಗರು ನೀರಿಗಿಳಿದರೆ ಅಪಾಯ ತಪ್ಪಿದ್ದಲ್ಲ. ಕೆಲವರಂತೂ ಸೆಲ್ಫಿ, ಫೋಟೋಗ್ರಫಿಯ ಹುಚ್ಚಾಟ ನಡೆಸಲು ಹೋಗಿ ಪ್ರಾಣ ತೆತ್ತಂತಹ ಘಟನೆಗಳೂ ಇಲ್ಲಿ ನಡೆದಿವೆ. ಈ ಕಾರಣದಿಂದಾಗಿ ಅಬ್ಬಿ ಜಲಪಾತದ ಭೇಟಿ ನಿಷೇಧಿಸಿದೆ.

Leave A Reply

Your email address will not be published.

error: Content is protected !!