ಮೌಲ್ಯಮಾಪನ ವೇತನಕ್ಕಾಗಿ ಉಪನ್ಯಾಸಕರ ಪರದಾಟ

0 33

ರಿಪ್ಪನ್‌ಪೇಟೆ: ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಕಾಲೇಜ್‌ಗಳ 2022-23ನೇ ಸಾಲಿನ 1.3.5 ಸೆಮಿಸ್ಟರ್‌ಗಳ ವಾಣಿಜ್ಯಶಾಸ್ತ್ರ, ಗಣಿತ, ವಿಜ್ಞಾನ ಇತರ ವಿಭಾಗಗಳ ಪರೀಕ್ಷೆಯ ಮೌಲ್ಯಮಾಪನ ಗೌರವಧನ ಬಾರದೇ ಉಪನ್ಯಾಸಕರು ಪರದಾಡುವಂತಾಗಿದೆ.

ಪರೀಕ್ಷೆ ಮುಗಿದು ವಿದ್ಯಾರ್ಥಿಗಳ ಫಲಿತಾಂಶ ಸಹ ಪ್ರಕಟಗೊಂಡಿದ್ದರೂ ಕೂಡಾ ಈವರೆಗೂ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನದ ವೇತನ ನೀಡದೆ ಇರುವುದು ಉಪನ್ಯಾಸಕರು ಗೊಂದಲಕ್ಕೊಳಗಾಗಿದ್ದಾರೆ.

ನೇತ್ರ ತಪಾಸಣೆ ಮತ್ತು ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕಾಲೇಜ್‌ನ ಕೆಲವು ಉಪನ್ಯಾಸಕರು ಹೆಸರು ಹೇಳದೆ ತಮ್ಮ ನೋವನ್ನು ಮಾಧ್ಯಮದವರ ಬಳಿ ಹಂಚಿಕೊಳ್ಳುತ್ತಾ, ನಮಗೆ ಮೌಲ್ಯಮಾಪನ ವೇತನ ಬಂದಿಲ್ಲ ನಾವುಗಳಲ್ಲಾ ಬಿಲ್ ಮಾಡಿ ಕಳುಹಿಸಲಾಗಿದ್ದು ಮೂರು ತಿಂಗಳು ಕಳೆದರೂ ಕೂಡಾ ವೇತನ ಬಿಡುಗಡೆ ಮಾಡದಿರುವುದರ ಬಗ್ಗೆ ತೀವ್ರ ಅಸಮದಾನಕ್ಕೆ ಕಾರಣವಾಗಿದೆ ಎಂದು ತಮ್ಮ ಮನದಾಳದ ನೋವನ್ನು ಈ ರೀತಿಯಲ್ಲಿ ಹಂಚಿಕೊಂಡರು.

Leave A Reply

Your email address will not be published.

error: Content is protected !!