ರಿಪ್ಪನ್‌ಪೇಟೆ : ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆರೆಹಳ್ಳಿ ಹೋಬಳಿಯ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರಮನೆ ಹಳ್ಳಕ್ಕೆ 63 ಲಕ್ಷ ರೂ. ವೆಚ್ಚದ ಕಿರು ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ರಿಪ್ಪನ್‌ಪೇಟೆ ಸಾಗರ ರಸ್ತೆಗೆ 5.50 ಕೋಟಿ ರೂ. ವೆಚ್ಚದ ಡಬಲ್ ರೋಡ್ ಕಾಮಗಾರಿಗೆ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಇಂದು ಶಂಕುಸ್ಥಾಪನೆ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ, ಜನತೆಯ ಮೂಲಭೂತ ಸಮಸ್ಯೆಗಳಾದ ರಸ್ತೆ ಕುಡಿಯುವ ನೀರು ಮತ್ತು ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಆಧ್ಯತೆ ನೀಡುತ್ತಿದ್ದು ಈ ಭಾಗದ ಬಹು ವರ್ಷದ ಕನಸು ಈಡೇರಿಸುವ ಮೂಲಕ ಚುನಾವಣೆಯ ಸಂದರ್ಭದಲ್ಲಿ ನೀಡಲಾದ ಭರವಸೆಯನ್ನು ಈಡೇರಿಸಿರುವುದಾಗಿ ಹೇಳಿ ಜಾತಿ ಮತ ಬೇದಭಾವನೆ ಮಾಡದೇ ಎಲ್ಲ ಸಮುದಾಯಗಳಿಗೆ ಹೆಚ್ಚು ಅನುದಾನ ಕೊಡಿಸುವುದರೊಂದಿಗೆ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ನಾನು ಜೊತೆಜೊತೆಯಾಗಿ ಡಬಲ್ ಇಂಜಿನ್‌ಯಾಗಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ತಾಲ್ಲೂಕ್ ಬಿಜೆಪಿ ಆಧ್ಯಕ್ಷ ಗಣಪತಿ ಬಿಳಗೋಡು, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ, ಪಿ.ರಮೇಶ್, ಗಣಪತಿ, ಮೆಣಸೆ ಆನಂದ, ಇನ್ನಿತರ ಬಿಜೆಪಿ ಪಕ್ಷದ ಮುಖಂಡರು ಹಾಜರಿದ್ದರು.