ರಾಜ್ಯ ರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ ಧೀಮಂತ ನಾಯಕ ಎಸ್ ಬಂಗಾರಪ್ಪ ; ಮಾಜಿ ಸಚಿವ‌ ಹೆಚ್ ಆಂಜನೇಯ

0 207

ಶಿಕಾರಿಪುರ: ಅಕ್ಷಯ ಆರಾಧನಾ ರೈತರ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ ನೀಡಿ ರಾಜ್ಯ ರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ ಧೀಮಂತ ನಾಯಕ ಮಾಜಿ ಮುಖ್ಮಮಂತ್ರಿ ದಿವಂಗತ ಎಸ್ ಬಂಗಾರಪ್ಪರವರು ಎಂದು ಮಾಜಿ ಸಚಿವರಾದ ಹೆಚ್ ಆಂಜನೇಯ ತಿಳಿಸಿದರು. 

ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಮುಖ್ಮಮಂತ್ರಿ ದಿ|| ಎಸ್ ಬಂಗಾರಪ್ಪರವರ ಪುಣ್ಯ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲೇನಾದರೂ ಜನ ಸಾಮಾನ್ಯರಿಗೆ ನೇರವಾಗಿ ಸೌಲಭ್ಯ ದೊರೆತಂತಾಗಿದ್ದು ಮತ್ತು ಅವರ ಕಲ್ಯಾಣಕ್ಕಾಗಿ ಯೋಜನೆಗಳು ಆರಂಭವಾಗಿದೆ ಎಂದಾದರೆ ಅದು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪರವರ ಅವಧಿಯಲ್ಲಿ. ರೈತರಿಗೆ ಉಚಿತ ವಿದ್ಯುತ್, ಅಕ್ಷಯ ಆರಾಧನಾ ಗ್ರಾಮೀಣ ಕೃಪಾಂಕ ನೀಡುವ ಯೋಜನೆಗಳನ್ನ ಜಾರಿಗೆ ತರುವ ಮೂಲಕ ರೈತರ, ಬಡವರ ಶೋಷಿತ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ ಮಾಜಿ ಮುಖ್ಮಮಂತ್ರಿ ಎಸ್ ಬಂಗಾರಪ್ಪರವರು ಇಂತಹಾ ಮಹಾನ್ ನಾಯಕರಿಗೆ ಆಶುತರ್ಪಣ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮ್ಮ ಭಾಗ್ಯ  ಎಂದರು.

ಜಾತ್ಯಾತೀತ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಎಲ್ಲಾ ಜನಾಂಗಕ್ಕೂ ನ್ಯಾಯ ಒದಗಿಸುವ ಮೂಲಕ ಲಿಂಗಾಯತ, ಒಕ್ಕಲಿಗ, ಸಣ್ಣ ಸಮುದಾಯದ ವೀರಪ್ಪ ಮೋಯಿಲಿ, ರಜಪೂತ ಸಮುದಾಯದ ಧರ್ಮಸಿಂಗ್ ರವರನ್ನ ಮುಖ್ಮಮಂತ್ರಿ ಮಾಡಿದೆಯಲ್ಲದೇ ಈಗ ಹಿಂದುಳಿದ ವರ್ಗಗಳ ರಾಜ್ಯದಲ್ಲಿ ನಾಲ್ಕನೇ ದೊಡ್ಡ ಜನಾಂಗದ ಸ್ಥಾನದಲ್ಲಿರುವ ಹಿಂದುಳಿದ ವರ್ಗದ ಕುರುಬ ಸಮಾಜದವರಾದ ಸಿದ್ಧರಾಮಯ್ಯರವರನ್ನ ಮುಖ್ಯಮಂತ್ರಿಯನ್ನಾಗಿಸಿದೆ. ಬಂಗಾರಪ್ಪರವರಂತೆಯೇ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಿದ್ಧರಾಮಯ್ಯರವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಜನಪರ ಕಾಳಜಿಗಳನ್ನು ಹೊತ್ತು ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದರು.

ಇದರಂತೆ ಮುಂದಿನ ದೇಶದ ಪ್ರಧಾನಮಂತ್ರಿಯನ್ನಾಗಿ ಹಿಂದುಳಿದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರನ್ನ ಆಯ್ಕೆ ಮಾಡಲು ಇಂಡಿಯಾ ಸಮಿತಿಯು ಒಪ್ಪಿಕೊಂಡಿದ್ದು, ಅದಕ್ಕನುಸಾರವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಬೆಂಬಲಿಸುವಂತೆ ಕರೆ ನೀಡಿದ ಅವರು, ರಾಜ್ಯದಲ್ಲಿ ಈ ಬಾರಿ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ರಾಜ್ಯದ ಜನತೆಯ ಆಶಯದಂತೆ ನಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಮಾಜಿ ಲೋಕಸಭಾ ಸದಸ್ಯರಾದ ಚಂದ್ರಪ್ಪರವರು ಮಾತನಾಡಿ, ರಾಜ್ಯಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪರವರ ಕೊಡುಗೆ ಅಪಾರವಾದದ್ದು. ಅದರಂತಹ ಮಹಾನ್ ನಾಯಕರು ನಮ್ಮ ಪಕ್ಷದಲ್ಲಿ ಮತ್ತೆ ಮತ್ತೆ ಹುಟ್ಟಿ ಬರಬೇಕು. ಅವರಂತೆಯೇ ಪಕ್ಷದ ಸಂಘಟನೆಯಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ಗೋಣಿ ಪ್ರಕಾಶ್, ಚಂದ್ರಕಾಂತ್, ಬಡಗಿ ಪಾಲಾಕ್ಷಪ್ಪ, ಸೇರಿದಂತೆ ಅನೇಕರು ಹಾಜರಿದ್ದರು.

Leave A Reply

Your email address will not be published.

error: Content is protected !!