ಗ್ಯಾಸ್ ಕಟ್ಟರ್ ಬಳಸಿ ಎಟಿಎಂನಲ್ಲಿದ್ದ ₹14 ಲಕ್ಷ ಲೂಟಿ !

0 43

ಚಿಕ್ಕಮಗಳೂರು : ಗ್ಯಾಸ್ ಕಟ್ಟರ್ ಬಳಸಿ ಎಟಿಎಂನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿರುವ ಘಟನೆ ನಗರದ ಹೌಸಿಂಗ್ ಬೋರ್ಡ್ ನಲ್ಲಿ ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ.

ನಗರದ ಹೌಸಿಂಗ್ ಬೋರ್ಡ್ ಬಳಿಯಿರುವ ಕೆನರಾ ಬ್ಯಾಂಕ್‌ನ ಎಟಿಎಂ ಮಷಿನ್ ಅನ್ನು ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಅದರೊಳಗಿದ್ದ ಸುಮಾರು ಹದಿನಾಲ್ಕು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.

ಕಳ್ಳತನ ನಡೆಸುವ ಮೊದಲು ಕಳ್ಳರು ಸಿಸಿ ಕ್ಯಾಮೆರಾವನ್ನು ನಿಷ್ಕ್ರಿಯಗೊಳಿಸಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು ಘಟನಾ ಸ್ಥಳಕ್ಕೆ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Leave A Reply

Your email address will not be published.

error: Content is protected !!