ಹೊಸನಗರದ ಖ್ಯಾತ ವಕೀಲ ಮತ್ತು ನೋಟರಿ ಎಂ. ಶಿವಾನಂದಪ್ಪ ನಿಧನ

0 1,161

ಹೊಸನಗರ: ಹೊಸನಗರದ ಖ್ಯಾತ ವಕೀಲರು ಮತ್ತು ನೋಟರಿಯವರಾದ ಎಂ. ಶಿವಾನಂದಪ್ಪ (70) ಅನಾರೋಗ್ಯದಿಂದ ನಿಧನರಾದರು.

ಅವರು ಪಟ್ಟಣದ ಮಾರಿಗುಡ್ಡ ರಸ್ತೆಯ ಸ್ವಗೃಹದಲ್ಲಿ ಗುರುವಾರ ಸಂಜೆ ನಿಧನರಾಗಿದ್ದು ಪಾರ್ಥಿವ ಶರೀರವನ್ನು ಶುಕ್ರವಾರ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಮಧ್ಯಾಹ್ನ 2 ಗಂಟೆಗೆ ಅವರ ಹುಟ್ಟೂರಾದ ಸೊರಬದ ನಜ್ಜೂರಿಗೆ ಕೊಂಡೊಯ್ಯಲಾಯಿತು.

ಮೃತರು ಪತ್ನಿ, ಇಬ್ಬರು ಪುತ್ರರು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

ಸಂತಾಪ:
ಖ್ಯಾತ ವಕೀಲ ಶಿವಾನಂದಪ್ಪನವರ ನಿಧನಕ್ಕೆ ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರಾದ ಬಿ.ಗೋವಿಂದಪ್ಪ, ಬಾರ್ ಅಸೋಸಿಯೇಶನ್ ಅಧ್ಯಕ್ಷ ವಾಲೆಮನೆ ಶಿವಕುಮಾರ್, ಹಿರಿಯ ವಕೀಲರಾದ ಷಣ್ಮುಖಪ್ಪ, ಹಿರಿಯಪ್ಪ, ಮಹೇಶ್, ಬಸವರಾಜ್, ಕರ್ಣಕುಮಾರ್ ಹಾಗೂ ವಕೀಲರ ಸಂಘದ ಎಲ್ಲ ಸದಸ್ಯರು, ಕೊಗಟಿ ರಾಜಶೇಖರ ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

Leave A Reply

Your email address will not be published.

error: Content is protected !!