ತೆರವಾಗಿರುವ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ

0 35


ಶಿವಮೊಗ್ಗ: ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾ.ಪಂ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಹೊರಡಿಸಿದೆ.


ಜಿಲ್ಲೆಯ ಭದ್ರಾವತಿ ಮತ್ತು ಹೊಸನಗರ ತಾಲ್ಲೂಕಿನಲ್ಲಿ ಚುನಾವಣೆ ನಡೆಯಲಿದೆ. ಫೆ.08 ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ. ಫೆ.14 ನಾಮಪತ್ರಗಳನ್ನು ಸಲ್ಲಿಸಲು ಕಡೆಯ ದಿನ. ಫೆ.15 ನಾಮಪತ್ರಗಳನ್ನು ಪರಿಶೀಲಿಸುವ ದಿನ. ಫೆ.17 ಉಮೇದುವಾರಿಕೆಗಳ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ. ಫೆ.25 ಮತದಾನ ಅವಶ್ಯವಿದ್ದರೆ, ಮತದಾನ ನಡೆಸಬೇಕಾದ ದಿನ. ಫೆ.27 ಮರು ಮತದಾನದ ಅವಶ್ಯವಿದ್ದರೆ, ಮತದಾನ ನಡೆಸಬೇಕಾದ ದಿನ. ಫೆ.28 ಮತಗಳ ಎಣಿಕೆ ದಿನ ಮತ್ತು ಚುನಾವಣೆ ಮುಕ್ತಾಯ ದಿನ.


ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿ ಗ್ರಾ.ಪಂ ಯ ಚಂದನಕರೆ(ಸಾಮಾನ್ಯ) 01 ಸ್ಥಾನ, ನಾಮಪತ್ರಗಳನ್ನು ಯಡೇಹಳ್ಳಿ ಗ್ರಾ.ಪಂ ಯಲ್ಲಿ ಸಲ್ಲಿಸಬೇಕು. ಹೊಸನಗರ ತಾಲ್ಲೂಕಿನ ಹೆದ್ದಾರಿಪುರ ಗ್ರಾ.ಪಂ ಯ ತಳಲೆ(ಹಿಂದುಳಿದ ‘ಅ’ವರ್ಗ) 01 ಸ್ಥಾನ ನಾಮಪತ್ರಗಳನ್ನು ಹೆದ್ದಾರಿಪುರ ಗ್ರಾ.ಪಂ ಯಲ್ಲಿ ಸಲ್ಲಿಸಬೇಕು. ನಾಗೋಡಿ(ನಿಟ್ಟೂರು) ಗ್ರಾ.ಪಂ ಯ ಕೋಟೆಶಿರೂರು(ಸಾಮಾನ್ಯ ಮಹಿಳೆ) 01 ಸ್ಥಾನ ಮತ್ತು ಹೆಬ್ಬಿಗೆ(ಸಾಮಾನ್ಯ) 01 ಸ್ಥಾನ ನಾಗೋಡಿ(ನಿಟ್ಟೂರು) ಇಲ್ಲಿ ನಾಮಪತ್ರಗಳನ್ನು ಸಲ್ಲಿಸಬೇಕು.

ದಿನಾಂಕ: 08-02-2023 ರಿಂದ 28-02-2023 ರವರೆಗೆ ಚುನಾವಣೆ ನಡೆಯುವ ಗ್ರಾ.ಪಂ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಸದರಿ ಪ್ರದೇಶಗಳಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮುಚ್ಚತಕ್ಕದ್ದು ಹಾಗೂ ಮಹರು ಮಾಡಿದ ಕೀಯನ್ನು ತಾಲ್ಲೂಕು ತಹಶೀಲ್ದಾರರಿಗೆ ಒಪ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶಿಸಿದ್ದಾರೆ.

Leave A Reply

Your email address will not be published.

error: Content is protected !!