ಲಿಂಗ ತಾರತಮ್ಯ ಸಾಹಿತ್ಯದಲ್ಲಿಲ್ಲ ; ಚಟ್ನಳ್ಳಿ ಮಹೇಶ್

0 33


ಚಿಕ್ಕಮಗಳೂರು : ಲಿಂಗ ತಾರತಮ್ಯ ರಹಿತ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಸಾಹಿತ್ಯ-ಸಂಸ್ಕೃತಿಯ ಪಾತ್ರ ಪ್ರಮುಖವಾದದ್ದು ಎಂದು ಅಭಾಸಪ ನಿಕಟಪೂರ್ವ ಜಿಲ್ಲಾಧ್ಯಕ್ಷ, ವಾಗ್ಮಿ ಚಟ್ನಳ್ಳಿಮಹೇಶ್ ನುಡಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದೊಂದಿಗೆ  ಶ್ರಾವಣಮಾಸದ ಪ್ರವಚನ ಮಾಲಿಕೆ ‘ಮುತ್ತಿನಂತ ಮಾತು’ ಅಭಿಯಾನದ ಅಂಗವಾಗಿ ಎಂಇಎಸ್ ಪ್ರೌಢಶಾಲೆಯಲ್ಲಿಂದು  ಅವರು ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ’ ಕುರಿತಂತೆ ಸಂವಾದಿಸಿ ಉಪನ್ಯಾಸ ನೀಡಿದರು.
ನಿಸರ್ಗದ ಜೊತೆಗೆ ಸ್ತ್ರಿಯನ್ನು ಸಮೀಕರಿಸಿರುವ ಸಾಹಿತ್ಯ ರಚನೆ ಈ ನೆಲದಲ್ಲಿ ವಿಫುಲವಾಗಿದೆ.  ಜೀವಜಂತುಗಳ ಒಳಿತನ್ನು ಕಲಿಸಿದ್ದು ಹೆಣ್ಣು.  ಕೆಟ್ಟಮಕ್ಕಳು ಹುಟ್ಟಬಹುದು ಆದರೆ ಕೆಟ್ಟತಾಯಿ ಇರುವುದಿಲ್ಲ ಎಂಬುದು ನಾಣ್ನುಡಿ ಎಂದ ಚಟ್ನಳ್ಳಿ ಮಹೇಶ್, ಹೆಣ್ಣಿಗೆ ಆರಂಭದ ದಿನಗಳಲ್ಲಿ ಪೂರ್ಣ ಸ್ವಾತಂತ್ರ್ಯವಿದ್ದು  ಬರುಬರುತ್ತಾ ವಿವಿಧ ಕಾರಣಗಳಿಗಾಗಿ ಸಂಕೋಲೆ ತೊಡಿಸಲಾಯಿತು ಎಂದು ವಿವರಿಸಿದರು.

ಮಾಂಸಖಂಡದಿಂದ ರಕ್ತಬಸಿದು ನಮಗೆ ಜನ್ಮ ನೀಡಿದ ತಾಯಿ ಸರ್ವಶ್ರೇಷ್ಠ.  ಆಕೆ ಅನುಭವದ ಶ್ರೀಮಂತ ನಿಘಂಟು.  ದೇವರ ಹೆಸರಿನಲ್ಲಿ ಬೆಳಗ್ಗೆ ಅರಳಿಕಟ್ಟೆಯನ್ನು ಸುತ್ತುವ ಕ್ರಿಯೆಯಲ್ಲಿ ಹೆಣ್ಣಿನ ವೃಕ್ಷಜ್ಞಾನ ಪರಿಸರ ಪ್ರೇಮ ವ್ಯಕ್ತವಾಗುತ್ತದೆ.  ವಾಸ್ತವವಾಗಿ ಅರಳಿಮರ ಬೆಳಗಿನಜಾವ ಅತಿಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಎಂಬ ಸತ್ಯ ಆಕೆಗೆ ತಿಳಿದಿತ್ತು ಎಂದರು.

ತಾಯಮನೆ ಸ್ಥಿರವಲ್ಲ, ಜಾಲಿಮರ ನೆರಳಲ್ಲ ಎಂಬ ಮಾತು ಸಾಹಿತ್ಯದಲ್ಲಿದೆ.  ಹಾಲುಂಡ ತವರು ಹೊಳೆದಂಡೆಯ ಗರಿಕೆಯಂತೆ ಹಬ್ಬಲೆಂದು ಹಾರೈಸುವ ಹೆಣ್ಣಿನ ಮನಸ್ಥಿತಿ ಲೋಕಹಿತವನ್ನು ಬಯಸುವುದಾಗಿದೆ. ನೆರೆಮನೆ ಸಿರಿದೇವಿಯಾಗು, ಹೊತ್ತಾಗಿ ಉಣಬೇಕು, ತುಂಬಿದಮನೆ ಒಡೆಯಬೇಡ ಎಂದು ತಾಯಿ ಮಗಳಿಗೆ ಹೇಳಿ ಕಳುಹಿಸುವ ಬುದ್ಧಿಮಾತಿನಲ್ಲಿ ತವರಿನ ಜೊತೆಗೆ ಗಂಡನಮನೆಯ ಬಾಂಧವ್ಯವನ್ನು ಬೆಸೆಯುವುದಾಗಿದೆ ಎಂದು ವಿವರಿಸಿದರು.

ಪಟ್ಟಣ ಸಹಕಾರ ಬ್ಯಾಂಕ್ ಶೇ.12 ಲಾಭಾಂಶ | 133 ಲಕ್ಷರೂ. ನಿವ್ವಳಲಾಭ: ಎಚ್.ಎನ್.ನಂಜೇಗೌಡ

ಚಿಕ್ಕಮಗಳೂರು : ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ 2022-23ನೆಯ ಸಾಲಿನಲ್ಲಿ 133 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದ ಅಧ್ಯಕ್ಷ ಎಚ್.ಎನ್.ನಂಜೇಗೌಡ, ಷೇರುದಾರರಿಗೆ ಶೇ.12 ಲಾಭಾಂಶವನ್ನು ಪ್ರಕಟಿಸಿದರು.

ನಗರದ ರಂಗಣ್ಣನವರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕಿನ 27ನೆಯ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1997ರಲ್ಲಿ ದಿವಂಗತ ಸಿ.ಎಂ.ಎಸ್.ಶಾಸ್ತ್ರಿಗಳ ನೇತೃತ್ವದಲ್ಲಿ ಆರಂಭಗೊಂಡ ಬ್ಯಾಂಕ್ ಅತ್ಯುತ್ತಮವಾಗಿ ಬೆಳವಣಿಗೆ ಕಂಡಿದ್ದು, 26 ವರ್ಷಗಳಲ್ಲೂ ಸತತವಾಗಿ ಲಾಭದಾಯಕವಾಗಿ ಮುನ್ನಡೆದಿದೆ.  ಜೊತೆಗೆ ‘ಎ’ಶ್ರೇಣಿಯಲ್ಲಿ ವರ್ಗೀಕರಿಸಲಾಗಿದೆ.  ಇದಕ್ಕೆಲ್ಲ ಆಡಳಿತ ಮಂಡಳಿ-ಸಿಬ್ಬಂದಿಯ ಪರಿಶ್ರಮದ ಜೊತೆಗೆ ಷೇರುದಾರರ  ಸಹಕಾರ ಕಾರಣ ಎಂದವರು ವಿವರಿಸಿದರು.

1800 ಸದಸ್ಯರಿಂದ 8.7ಲಕ್ಷ ಷೇರು ಬಂಡವಾಳದೊಂದಿಗೆ ಪ್ರಾರಂಭಗೊಂಡು ಜಿಲ್ಲೆಯ ಪ್ರಥಮ ಅರ್ಬನ್ ಬ್ಯಾಂಕ್ ಹೆಗ್ಗಳಿಕೆಗೆ ಪಾತ್ರವಾಗಿದೆ.  ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾರಂಭಗೊಂಡಿರುವ ಹೊಸ ಹೊಸ ಸೇವೆಗಳನ್ನೆಲ್ಲ ಗ್ರಾಹಕರಿಗೆ ನೀಡುತ್ತಿದೆ.  ನಗರದ ಹೃದಯಭಾಗದಲ್ಲಿ ಸ್ವಂತಕಟ್ಟಡದಲ್ಲಿ ಕಾರ‍್ಯನಿರ್ವಹಿಸುತ್ತಿದೆ ಎಂದರು. 

ಪ್ರಸ್ತುತ 290 ಲಕ್ಷರೂ.ಗಳ ಷೇರುಬಂಡವಾಳ 6860 ಲಕ್ಷರೂ.ಠೇವಣಿ ಹೊಂದಿದೆ. 2771 ಲಕ್ಷರೂ.ಗಳ ಹೂಡಿಕೆ ಹೊಂದಿದೆ.  4890 ಲಕ್ಷರೂ. ಸಾಲ ಮತ್ತು ಮುಂಗಡಗಳನ್ನು ವಿತರಿಸಿದೆ.  8079 ಲಕ್ಷರೂ. ದುಡಿಯುವ ಬಂಡವಾಳ ಹೊಂದಿದೆ.  ಈ ಸಾಲಿನಲ್ಲಿ ಒಟ್ಟು 792 ಲಕ್ಷರೂ.ಗಳ ಆದಾಯ ಹೊಂದಿದ್ದು 133.52 ಲಕ್ಷರೂ. ನಿವ್ವಳ ಲಾಭ ಗಳಿಸಿದೆ ಎಂದ ನಂಜೇಗೌಡ, ಆಡಳಿತಮಂಡಳಿಯ ಶಿಫಾರಸ್ಸಿನ ಮೇರೆಗೆ ಶೇ.12ಲಾಭಾಂಶ ವಿತರಿಸುವುದಾಗಿ ಪ್ರಕಟಿಸಿದರು.

ಬ್ಯಾಂಕಿನ ಒಂದು ಷೇರಿನ ಮುಖಬೆಲೆ 2,000 ರೂ.ಇದ್ದು, ಇದಕ್ಕಿಂತ ಕಡಿಮೆ ಮೊಬಗಲನ್ನು ಪಾವತಿಸಿದವರು ಸರಿದೂಗಿಸಿಕೊಳ್ಳಲು ಮನವಿ ಮಾಡಿದ ಅವರು,  ಎನ್‌ಪಿಎ ಪ್ರಮಾಣ ನಿಯಂತ್ರಣದಲ್ಲಿದೆ.  ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡುವ ಸೌಲಭ್ಯಗಳನ್ನೆಲ್ಲ ನೀಡುತ್ತಾ ಅವುಗಳೊಂದಿಗೆ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ನಂಜೇಗೌಡ, ಷೇರುದಾರರ ಸಹಕಾರ ಕೋರಿದರು.

ನಗರ ಹೊರವಲಯ ಬೈಪಾಸ್ ರಸ್ತೆಯಲ್ಲಿ ಶಾಖೆವೊಂದನ್ನು ಆರಂಭಿಸಲು ಆರ್.ಬಿ.ಐ. ಅನುಮತಿ ಪಡೆಯಲಾಗಿದೆ.  ಕಟ್ಟಡವನ್ನು ನಿಗದಿಸಿದ್ದು 3-4 ತಿಂಗಳಲ್ಲಿ ಬ್ಯಾಂಕಿನ ಪ್ರಥಮ ಶಾಖೆ ಕರ‍್ಯಾರಂಭಿಸಲಿದೆ ಎಂದು ಅಧ್ಯಕ್ಷ ನಂಜೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿರ್ದೇಶಕರುಗಳಾದ ಎಚ್.ಸಿ.ಶಶಿಪ್ರಸಾದ ಸ್ವಾಗತಿಸಿ, ಕೆ.ಡಿ.ಪುಟ್ಟಣ್ಣ ವಂದಿಸಿದರು.  ಭವಾನಿ ಪ್ರಾರ್ಥಿಸಿದ್ದು, ಮುಖ್ಯಕರ‍್ಯನಿರ್ವಹಣಾಧಿಕಾರಿ ಬಿ.ವಿ.ರಾಘವೇಂದ್ರ ನಿರೂಪಿಸಿದರು.
ನಿರ್ದೇಶಕರುಗಳಾದ ಎಂ.ವಿ.ಷಡಕ್ಷರಿ, ಪದ್ಮಾತಿಮ್ಮೇಗೌಡ, ಮಂಜುನಾಥಜೋಷಿ, ಜಿ.ರಘು, ಎಂ.ಎಸ್.ಉಮೇಶ್, ಕೆ.ಎಸ್.ಧರ್ಮರಾಜ, ಭಗವತಿಹರೀಶ್, ಶೈಲಜಾಮಂಜುನಾಥ, ಸಿ.ಆರ್.ಮಂಜು,  ಕೆ.ಟಿ.ಮಂಜುನಾಥ್ ಮತ್ತು ಸಿ.ವಿ.ಹರ್ಷ ವೇದಿಕೆಯಲ್ಲಿದ್ದರು.  ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು.

Leave A Reply

Your email address will not be published.

error: Content is protected !!