ಶಿವಮೊಗ್ಗ : ನಗರದ ಹೊರವಲಯದಲ್ಲಿ ಬೈಕ್‌ಗೆ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾಗರ ರಸ್ತೆಯಲ್ಲಿ ಶ್ರೀರಾಮಪುರದಿಂದ ಶಿವಮೊಗ್ಗದ ಕಡೆ
ಬೈಕ್‌ನಲ್ಲಿ ಬರುತ್ತಿದ್ದ ಜಾರ್ಖಂಡ್ ಮೂಲದ ಯುವಕ ಅನ್ಸಾರಿ ಎಂಬುವವರಿಗೆ ಕಾರೊಂದು ಅಡ್ಡ ಬಂದಿದೆ. ವಾಜಪೇಯಿ ಲೇಔಟ್ ಬಳಿ ಕಾರನ್ನ ಬಲಭಾಗದಿಂದ ಹಿಂದಿಕ್ಕಲು ಯತ್ನಿಸುವ ವೇಳೆ ಖಾಸಗಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅನ್ಸಾರಿಯ ಬೈಕ್ ಬಸ್ ಕೆಳಗೆ ಹೋಗಿದೆ. ಸ್ಥಳದಲ್ಲಿಯೇ ಅನ್ಸಾರಿ ಜೀವ ಬಿಟ್ಟಿದ್ದಾನೆ.
ಕೆಲಸಕ್ಕಾಗಿ ಜಾರ್ಖಂಡ್ ನಿಂದ ಬಂದಿದ್ದ ಅನ್ಸಾರಿ ಶ್ರೀರಾಮಪುರದಲ್ಲಿ ಮನೆ ಮಾಡಿಕೊಂಡಿದ್ದನು. ಇಂದು ಆತನ ಪ್ರಾಣ ಹಾರಿಹೋಗಿದೆ ಇಂದು ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಘಟನೆ ನಡೆದಿದೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.