ಕಟ್ಟಡಕ್ಕೆ ಪೇಟಿಂಗ್ ಮಾಡುವ ವೇಳೆ 3ನೇ ಮಹಡಿಯಿಂದ ಬಿದ್ದು ಯುವಕ ಸಾವು

0 685

ಚಿಕ್ಕಮಗಳೂರು : ಕಟ್ಟಡಕ್ಕೆ ಪೇಟಿಂಗ್ ಮಾಡುವ ವೇಳೆ ಮೂರನೇ ಮಹಡಿಯಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಮಾರ್ಕೇಟ್ ರಸ್ತೆಯಲ್ಲಿ ನಡೆದಿದೆ.

ರಘು ಸ್ಟಿಕರ್ಸ್ ನೂತನ ಕಟ್ಟಡಕ್ಕೆ ಪೇಟಿಂಗ್ ಮಾಡುವ ವೇಳೆ ಘಟನೆ ನಡೆದಿದೆ. ಕಟ್ಟಡಕ್ಕೆ ಪೇಟಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಪೈಂಟರ್ ಜಗದೀಶ್ ಮೂರನೇ ಮಹಡಿಯಿಂದ ಬಿದ್ದು ತೀವ್ರ ರಸ್ತಸ್ರಾವವಾಗಿದ್ದು, ಹಾಸನ ಜಿಲ್ಲೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ.

ಯಾವುದೇ ಸುರಕ್ಷತೆ ಇಲ್ಲದೆ ಕಟ್ಟಡ ಏರಿ ಕೆಲಸ ಮಾಡುವ ವೇಳೆ ಏಕಾಏಕಿ ಹಗ್ಗ ತುಂಡಾಗಿ ಅವಘಡ ಸಂಭವಿಸಿರುವುದಾಗಿ ತಿಳಿದುಬಂದಿದೆ. ಚಿಕ್ಕಮಗಳೂರು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಜಗದೀಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ. ಜೊತೆಗೆ ಕಾರ್ಮಿಕರಿಗೆ ಭದ್ರತೆ ಪರಿಕರಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!