ಮೆಟ್ರಿಕ್ ಮೇಳ ; ಹೇಗಿತ್ತು ಗೊತ್ತಾ ಮಕ್ಕಳ ಸಂತೆ ?

0 70

ಶಿವಮೊಗ್ಗ: ದುರ್ಗಿಗುಡಿ ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮೆಟ್ರಿಕ್ ಮೇಳವನ್ನು (ಮಕ್ಕಳ ಸಂತೆ) ಹಮ್ಮಿಕೊಳ್ಳಲಾಗಿತ್ತು.
5ನೇ ತರಗತಿ ವಿದ್ಯಾರ್ಥಿಗಳು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸಂತೆಯ ರೀತಿಯಲ್ಲಿ ಮಾಡುವುದರ ಮೂಲಕ ಸಾಮಾಜಿಕ ವ್ಯವಹಾರದ ತಿಳುವಳಿಕೆಯನ್ನು ಪಡೆದರು.

ಈ ಮಕ್ಕಳ ಸಂತೆಯಲ್ಲಿ ಮಕ್ಕಳು ಪಾನಿಪೂರಿ, ಸ್ನ್ಯಾಕ್ಸ್, ಕಾಂಡಿಮೆಂಡ್ಸ್, ಬೇಕರಿ ಪದಾರ್ಥಗಳು, ತಂಪು ಪಾನೀಯ, ತರಕಾರಿ, ಹಣ್ಣು ಹಂಪಲುಗಳು, ಸೊಪ್ಪು ಮತ್ತಿತರ ಪದಾರ್ಥಗಳನ್ನು ಮಾರಾಟ ಮಾಡಿ ಅನುಭವ ಪಡೆದರು.
ಶಿಕ್ಷಕರು ಅವರಿಗೆ ವ್ಯವಹಾರದ ಬಗ್ಗೆ ಮಾಹಿತಿಯನ್ನು ನೀಡಿದರು. ವೈವಿಧ್ಯಮಯ ತಿನಿಸುಗಳು ಮತ್ತು ಇನ್ನಿತರ ಪದಾರ್ಥಗಳನ್ನು ಮಾರುವುದರ ಮೂಲಕ ಮಕ್ಕಳು ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಇಒ ನಾಗರಾಜ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಾನಾ ಯಕ್, ಸಹ ಶಿಕ್ಷಕಿಯಾದ ದೀಪಾ ಕುಬ್ಸದ್, ಜಯಲಕ್ಷ್ಮೀ, ರೋಜ್‌ಮೇರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!