ಶಿವಮೊಗ್ಗ : ಇಲ್ಲಿನ ಏರ್‌ಪೋರ್ಟ್ ಉದ್ಘಾಟನೆಗೊಂಡು ತಿಂಗಳುಗಳೇ ಕಳೆದರು ಸಾರ್ವಜನಿಕರ ಉಪಯೋಗಕ್ಕೆ ಸಿಗದೆ ಬರಿ ವಿವಿಐಪಿಗಳ ಓಡಾಟಕ್ಕೆ ಸೀಮಿತವಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಐಎಟಿಎ ಕೋಡ್ ಸಿಕ್ಕಿದ್ದರು ಕೂಡ ಲೋಹದ ಹಕ್ಕಿಗಳ ಸದ್ದು ಕೇಳುತ್ತಿಲ್ಲ.
ಐಎಟಿಎ ನಿಯಮದ ಪ್ರಕಾರ ಕೋಡ್ ದೊರೆತ 45 ದಿನಗಳ ಬಳಕ ವಿಮಾನ ಹಾರಡಬೇಕು. ಜುಲೈ ಹೊತ್ತಿಗೆ ವಿಮಾನ ಸೇವೆ ಜನರಿಗೆ ಪ್ರಾಪ್ತವಾಗಬೇಕು ಆದರೆ ವಿಮಾನ ಹಾರಾಟ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.
ರಾಜಕೀಯ ನಾಯಕರಿಗೆ ಸೀಮಿತವಾದ ಏರ್‌ಪೋರ್ಟ್ :
ಒಂದೇ ತಿಂಗಳಲ್ಲಿ ನಾಲ್ಕೈದು ಬಾರಿ ಶಿವಮೊಗ್ಗ ಏರ್‌ಪೋರ್ಟ್ ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ.
ಕನೆಕ್ಟಿಟಿಗೆ ಏರ್‌ಪೋರ್ಟ್ ಬಳಸಿಕೊಂಡ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಯಿಂದಲೂ ಶಿವಮೊಗ್ಗ ವಿಮಾನ ನಿಲ್ದಾಣ ಬಳಕೆಯಾಗಿದೆ. ಕೇವಲ ವಿಶೇಷ ವಿಮಾನಗಳು ಮಾತ್ರ ಶಿವಮೊಗ್ಗ ಏರ್‌ಪೋರ್ಟ್ ಗೆ ಬಂದಿಳಿದಿವೆ. ಚುನಾವಣಾ ಪ್ರಚಾರಕ್ಕೆ ಜಂಕ್ಷನ್ ರೀತಿಯಲ್ಲಿ ಬಳಕೆಯಾಗಿದೆ.
ಶಿವಮೊಗ್ಗದಲ್ಲಿ ಲೋಹದ ಹಕ್ಕಿಗಳ ಕಲರವ ಇನ್ನಷ್ಟು ವಿಳಂಬ ಸಾಧ್ಯತೆ ಇದ್ದು, ಏರ್‌ಪೋರ್ಟ್ ತಾಂತ್ರಿಕವಾಗಿ ಯಾವುದೇ ಸಮಸ್ಯೆಗಳು ಇಲ್ಲ. ಜೂನ್ ಎರಡನೇ ವಾರದಿಂದ ವರ್ಷಧಾರೆ ಆರಂಭದ ಹಿನ್ನೆಲೆ ಕಂಪನಿಗಳು ಮುಂದೆ ಬರಲು ಇನ್ನಷ್ಟು ವಿಳಂಬ ಸಾಧ್ಯತೆ ಇದೆ. ಮಳೆಗಾಲದ ಸಂದರ್ಭದಲ್ಲಿ ವಿಮಾನ ಹಾರಾಟಕ್ಕೆ ವಿಮಾನಯಾನ ಸಂಸ್ಥೆಗಳು ಮುಂದಾಗುವುದಿಲ್ಲ.
ಶಿವಮೊಗ್ಗದಲ್ಲಿ ವಿಮಾನ ಹಾರಾಟಕ್ಕೆ ಸುಮಾರು ಆರು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ.
ಶಿವಮೊಗ್ಗ ವಿಮಾನ ನಿಲ್ದಾಣವು ಲೋಕಾರ್ಪಣೆಗೊಂಡಾಗಿನಿಂದ ರಾಜಕೀಯ ನಾಯಕರ ಆಗಮನ ಮತ್ತು ನಿರ್ಗಮನಕ್ಕೆ ಅಧಿಕ ಪ್ರಮಾಣದಲ್ಲಿ ಬಳಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೇವೆ ಬಳಸಿಕೊಂಡ ಪ್ರಮುಖರಾಗಿದ್ದಾರೆ.