ಇನ್ನೆರಡು ಪುಣ್ಯ ಕ್ಷೇತ್ರಗಳಲ್ಲಿ ಮಸೀದಿ ಮುಕ್ತ ಮಾಡಲಿದ್ದೇವೆ ; ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

0 308

ಶಿಕಾರಿಪುರ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಅದರಂತೆ ಇನ್ನೂ ಎರಡು ಪುಣ್ಯ ಕ್ಷೇತ್ರಗಳಲ್ಲಿ ಮಸೀದಿ ಮುಕ್ತ ಮಾಡಲಿದ್ದೇವೆ ಇದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಆಕ್ರೋಶ ಭರಿತರಾಗಿ ಹೇಳಿದರು.

ಪಟ್ಟಣದ ಹಳೆ ಸಂತೆ ಮೈಧಾನದ ಬಳಿಯಿರುವ ಶ್ರೀ ಮಾರಿಕಾಂಬಾ ಬಯಲುರಂಗ ಮಂದಿರದಲ್ಲಿ ಗುರುವಾರ ಬಿಜೆಪಿ ವತಿಯಿಂದ ಹಿಂದುಳಿದ ವರ್ಗಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದುಗಳ ಅನೇಕ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಹಿಂದೂಗಳ ಪರವಾಗಿ ತೀರ್ಪು ನೀಡಿದೆ. ಈ ಆದೇಶದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಅದೇ ರೀತಿ ಮಥುರಾದಲ್ಲಿ ಕೃಷ್ಣ ಮಂದಿರ, ಕಾಶಿಯಲ್ಲಿ ವಿಶ್ವನಾಥ ಮಂದಿರ ನಿರ್ಮಾಣ ಮಾಡಲಾಗುವುದು. ಇದೂ ಕೂಡ ನ್ಯಾಯಾಲಯದ ಮೊರೆ ಹೋಗಿ ಈ ವಿಚಾರವಾಗಿಯೂ ಕೂಡ ಈಗಾಗಲೇ ಸುಪ್ರೀಂಕೋರ್ಟ್‌ನ ತೀರ್ಪು ದೇಶದ ಹಿಂದುಗಳ ಪರವಾಗಿದ್ದು, ಈ ಎರಡೂ ಪುಣ್ಯ ಕ್ಷೇತ್ರಗಳಲ್ಲಿ ಮಂದಿರವನ್ನು ನಿರ್ಮಾಣವಾಗುವುದು‌ ಶತಸಿದ್ಧ ಎಂದರು.

ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ? ಎಂದು ಕನಕದಾಸರು ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವ ಮಹಾನ್ ಮನವತಾವಾದಿ ಅವರ ಹೆಸರಿನಲ್ಲೂ ಕಾಂಗ್ರೆಸ್ಸಿಗರು ಜಾತಿ ರಾಜಕಾರಣ ಮಾಡುತ್ತಿರುವುದು ಶೋಚನಿಯ. ರಾಹುಲ್ ಗಾಂಧಿ ರವರು ನರೇಂದ್ರ ಮೋದಿಯವರು ಹಿಂದುವಲ್ಲ. ಆದರೆ ರಾಹುಲ್ ಗಾಂಧಿರವರ ಜಾತಿ ಯಾವುದು ? ಎಂದು ಪ್ರಶ್ನಿಸಿದರು.

ಇಡೀ ವಿಶ್ವವೇ ಮೋದಿಯವರು ಕೇವಲ ಒಂದೇ ಜಾತಿಗೆ ಸೇರಿದವರಲ್ಲದ್ದರಿಂದ ವಿಶ್ವವೇ ಅವರನ್ನ ಕೊಂಡಾಡುತ್ತಿದೆ. 65 ವರ್ಗಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ 10 ವರ್ಗಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದು ತುಲನೆ ಮಾಡಬೇಕು. ರಾಘವೇಂದ್ರರವರು ಸಂಸದರಾದ ನಂತರ ಜಿಲ್ಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿ, ಈ ಮಾತು ಕಾಂಗ್ರೇಸ್ ರವರು ಕೂಡ ಹೇಳುತ್ತಾರೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದ ನಂತರ ಬಿಎಸ್ವೈ ರವರು ಸಿಎಂ ಆದ ನಂತರ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರಲ್ಲದೇ ಸಮಾನತೆ ನೀಡಿದ್ದಾರೆ. ಕುಲಕುಲ ಎಂದು ಎಲ್ಲಾ ಸಮುದಾಯಗಳ ಒಗ್ಗೂಡಿಕೆಗಾಗಿ ಕನಕದಾಸರು ಈ ಕನಕದಾಸರ ಜಯಂತಿಗೆ ಬಿಜೆಪಿ ಸರ್ಕಾರ ಬರಬೇಕಾಯಿತು ಎಂದರು.

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ತಾಲೂಕಿನ ಶಾಸಕ ಬಿ‌.ವೈ. ವಿಜಯೇಂದ್ರ ಮಾತನಾಡುತ್ತಾ, ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆ ಇದು ವಿದೇಶಿಗರು ಭಾರತದ ಚುನಾವಣಾ ನೋಡುತ್ತಿದ್ದಾರೆ. ಮೂರನೇ ಬಾರಿಗೆ ನರೇಂದ್ರ ಮೋದಿಜಿ ಅವರು ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತಾಲ್ಲೂಕಿನ ಗ್ರಾಮೀಣ ಭಾಗದಿಂದ ಬಸ್‌ಗಳು ಬೇಕು ಎಂದು ಮನವಿ ಬಂದ ಮೇರೆಗೆ ನಾನು ಸಾರಿಗೆ ಸಚಿವರನ್ನು ಭೇಟಿ ಮಾಡಿ ತಾಲೂಕಿನ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕೆ ಎಸ್ ಆರ್ ಟಿ ಸಿ ಬಸ್‌ಗಳನ್ನು ವ್ಯವಸ್ಥೆ ಮಾಡಿ ಈ ದಿನ ಲೋಕಾರ್ಪಣೆಗೊಳಿಸಿದ್ದೇವೆ. ತಾಲೂಕಿನ ಜನರು ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.   

ಬಿ ವೈ ರಾಘವೇಂದ್ರ ಅಂತ ಕ್ರಿಯಾಶೀಲ ಸಂಸದರು ನಾವು ಕಾಣಲು ಸಾಧ್ಯವಿಲ್ಲ, ಶಿವಮೊಗ್ಗ ಇಂದು ಸ್ಮಾರ್ಟ್ ಸಿಟಿ ಆಗಿದ್ದರೆ ಅದರ ಹಿಂದೆ  ಸಂಸದ ರಾಘವೇಂದ್ರರ ಶ್ರಮ ಇದೆ ಎಂದರು.

ಸಂಸದ ಬಿ ವೈ ರಾಘವೇಂದ್ರ ಮಾತನಾಡುತ್ತಾ, ದೇಶವನ್ನು ಆಳಿದ 60 ವರ್ಷಗಳ ಕಾಲ ಕಾಂಗ್ರೆಸ್ಸಿಗರು ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾ ಬಂದರು ಆದರೆ ರೈತರಿಗಾಗಿ ಯಾವುದೇ ವಿಶಿಷ್ಟ ಕಾರ್ಯಕ್ರಮಗಳನ್ನು ಕೊಡಲಿಲ್ಲ. ಆದರೆ ನರೇಂದ್ರ ಮೋದಿಜಿ ಅವರು ಕೃಷಿ ಸಮ್ಮಾನ್ ಯೋಜನೆ ಜಾರಿಗೆ ತಂದು ಅವರ ಖಾತೆಗೆ 6,000ಗಳನ್ನು ನೇರ ಜಮಾ ಮಾಡುತ್ತಿದ್ದಾರೆ. ತಾಲೂಕಿಗೆ ನೀರಾವರಿ ಯೋಜನೆಗಳನ್ನು, ರೈಲ್ವೆ ಯೋಜನೆ ವಿಮಾನ ನಿಲ್ದಾಣ, ರೈಲ್ವೆ ಮೇಲ್ ಸೇತುವೆ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ತಾಲೂಕಿನ ಅಭಿವೃದ್ಧಿಗಾಗಿ ಮಾಡಿದ್ದೇನೆ. ನಾನು ಈಗ ನಿಮ್ಮ ಮುಂದೆ ಕೈಜೋಡಿಸಿ ಮಾಡಿದ ಕೆಲಸಕ್ಕೆ ಕೂಲಿಯನ್ನು ಕೇಳುತ್ತಿದ್ದೇನೆ ಮುಂಬರುವ ಚುನಾವಣೆಯಲ್ಲಿ ನೀವು ನನಗೆ ನಿಮ್ಮ ಆಶೀರ್ವಾದಪೂರ್ವಕ ಮತ ನೀಡುವ ಮೂಲಕ ನನಗೆ ಕೂಲಿಯನ್ನು ಸಂದಾಯ ಮಾಡಿ ಎಂದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡುತ್ತಾ, ದೀವರು, ಈಡಿಗರು,  ಬಿಲ್ಲವರು ಮುಂತಾದ ಜನಾಂಗಗಳು ಸೇರಿ ಮಾರ್ಚ್ 5 ರಂದು ಸಾಗರದಲ್ಲಿ 40 ಸಾವಿರಕ್ಕೂ ಅಧಿಕ ಜನರು  ಸೇರಿ ಶಕ್ತಿಸಾಗರ  ಸಂಗಮ ಎಂದು ಕಾರ್ಯಕ್ರಮ ನಡೆಸಿ ಮುತ್ಸದ್ದಿ ರಾಜಕಾರಣಿ ಬಿ.ಎಸ್ ಯಡಿಯೂರಪ್ಪರವರನ್ನು ಸನ್ಮಾನ ಮಾಡಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಂ ಡಿ ಲಕ್ಷ್ಮೀನಾರಾಯಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ್ , ಹೆಚ್ ಟಿ ಬಳಿಗಾರ, ಡಾ. ಧನಂಜಯ್ ಸರ್ಜಿ, ಕೆ. ರೇವಣಪ್ಪ, ಕೆ ಹಾಲಪ್ಪ, ಶಾರದಾ ಅಪ್ಪಾಜಿ ಗೌಡ, ಪ್ರಶಾಂತ್, ನಿವೇದಿತಾರಾಜು, ಭದ್ರಾಪುರದ ಪಾಲಾಕ್ಷಪ್ಪ,  ನಿಂಬೆಗೊಂದಿ ಸಿದ್ದಲಿಂಗಪ್ಪ, ರಾಮನಾಯಕ್, ರಾಜು ತಲ್ಲೂರು, ಸುಧಾಕರ್, ಭದ್ರಾವತಿ ಕರುಣಾಮೂರ್ತಿ, ರಾಜ್ಯ ಒಕ್ಕಲಿಗ ಮಹಿಳಾ  ಸಮಾಜದ ಅಧ್ಯಕ್ಷರಾದ ಶಾಂತ ಸುರೇಂದ್ರ ಮುಂತಾದವರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!